ಲಿಫ್ಟ್ ಶಫ್ಟ್‌ನೊಳಗೆ ಬಿದ್ದ ಬಾಲಕ, ಜೀವಾಪಾಯದಿಂದ ಪಾರು
ಮುಂಬೈ, ಜು.6: ಉಪನಗರ ವಸಾಯಿ ಕಟ್ಟಡವೊಂದರ ಖಾಲಿ ಲಿಫ್ಟ್ ಶಫ್ಟ್‌ನೊಳಗೆ ಬಿದ್ದ 13ರ ಹರೆಯದ ಬಾಲಕ ಜೀವಾಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ನಡೆದಿದೆ.
ಘಟನೆಯು ವಸಾಯಿ(ಪಶ್ಚಿಮ) ಬಬೋಲಾ ನಾಕಾದ ಅಗರ್‌ವಾಲ್ ಪೀಸ್ ಹೇವನ್ ಟವರ್‌ನಲ್ಲಿ ನಡೆದಿದೆ. ಘಟನೆ ನಡೆಯುವಾಗ ಕರೆಂಟ್ ಇರಲಿಲ್ಲ. ಬಾಲಕ ಬಿಲ್ಡಿಂಗ್‌ನ ನಿವಾಸಿಯಾಗಿದ್ದಾನೆ.
ಸಂಜೆ 6.30ರ ಸುಮಾರಿಗೆ ಪುಷ್ಕರ್ ಮಂಡಳ್ ಎಂಬಾತ ನಾಲ್ಕನೆ ಮಾಳಿಗೆಯಲ್ಲಿ ಕಬ್ಬಿಣದ ಗ್ರಿಲ್ ಗೇಟ್ ಓಪನ್ ಮಾಡಿದ್ದಾನೆೆ. ಆಗ ಲಿಫ್ಟ್ ಕಾರ್ ಆರನೆ ಮಾಳಿಗೆಯಲ್ಲಿತ್ತು. ಆದಾಗ್ಯೂ, ಲಿಫ್ಟ್ ಬಾಗಿಲು ತೆರೆದಾಗ ಬಾಲಕ ಲಿಫ್ಟ್‌ನೊಳಗೆ ಬಿದ್ದಿದ್ದಾನೆ. ಲಿಫ್ಟ್ ಶಫ್ಟ್‌ನ ವೈಯರ್‌ಗೆ ಬಾಲಕ ಸಿಕ್ಕಿಹಾಕಿಕೊಂಡ ಕಾರಣ ತಳ ಮಾಳಿಗೆಗೆ ಬಿದ್ದು ದೊಡ್ಡ ಅಪಾಯವಾಗುವ ಸಾಧ್ಯತೆ ತಪ್ಪಿತು ಎಂದು ಮಾಣಿಕ್‌ಪುರ್ ಪೊಲೀಸರು ತಿಳಿಸಿದ್ದಾರೆ.
ಬಾಲಕನ ಕಿರುಚಾಟವನ್ನು ಕೇಳಿದ ನಿವಾಸಿಗರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ. ಪುಷ್ಕರ್‌ನ ಬಲಭಾಗದ ಮುಖ ಬಿರುಕು ಬಿಟ್ಟಿದೆ. ಕಾರ್ಡಿನಲ್ ಗ್ರೆಸಿಯಸ್ ಹಾಸ್ಪಿಟಲ್‌ನ ಐಸಿಯುನಲ್ಲಿರುವ ಬಾಲಕನ ಆರೋಗ್ಯ ಸ್ಥಿರವಾಗಿದೆ ಎಂದು ವಸಾಯಿ ವೈದ್ಯರು ತಿಳಿಸಿದ್ದಾರೆ.