×
Ad

ಈದ್ ಸಂಭ್ರಮ ಹಾದಿ ತಪ್ಪದಿರಲಿ: ಬಿ.ಎಚ್. ಉಸ್ತಾದ್

Update: 2016-07-06 11:04 IST

ವಿಟ್ಲ, ಜು.5: ಈದ್ ಸಂಭ್ರಮದ ಹೆಸರಿನಲ್ಲಿ ಇಂದು ನಮ್ಮ ಮನೋ ಅಸ್ತಿತ್ವವನ್ನು ಶೈತಾನನ ಕೈಗೆ ಒಪ್ಪಿಸಿ ಇಹಪರ ವಿನಾಶವನ್ನು ಎದುರಿಸದಿರಿ ಎಂದು ಬಿ.ಎಚ್.ಅಬೂಸ್ವಾಲಿಹ್ ಉಸ್ತಾದ್ ಎಚ್ಚರಿಕೆ ನೀಡಿದ್ದಾರೆ.

ಆಲಡ್ಕದಲ್ಲಿ ಈದುಲ್ ಫಿತ್ರ್ ನಮಾಝ್ ಹಾಗೂ ಖುತ್ಬಾ ನಿರ್ವಹಿಸಿದ ಬಳಿಕ ಪ್ರವಚನ ನೀಡಿದ ಅವರು, ಮುಸಲ್ಮಾನನಿಗೆ ಇಂದಿನ ಪೆರ್ನಾಳ್ ಅಂತಿಮವಲ್ಲ. ಆಧ್ಯಾತ್ಮಿಕ ಉದ್ದೇಶದ ಹಲವು ಪೆರ್ನಾಳ್ಗಳನ್ನು ಎದುರುಗೊಳ್ಳಲಿಕ್ಕಿದೆ. ಮರಣ, ಖಬ್ರ್, ಸ್ವಿರಾತ್, ಹಿಸಾಬ್, ಅಲ್ಲಾಹನ ಲಿಖಾ ಕಾಣುವುದು ಮೊದಲಾದ ಪೆರ್ನಾಳ್ಗಳಲ್ಲಿ ಸಂತೋಷ ನಮ್ಮದಾಗಲಿ. ಆ ನಿಟ್ಟಿನಲ್ಲಿ ಸತ್ಕರ್ಮಗಳು ಸಾಗಲಿ ಎಂದು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News