ಕಾಸರಗೋಡಿನಲ್ಲಿ ಸಡಗರದ ಈದುಲ್ ಫಿತ್ರ್
Update: 2016-07-06 11:25 IST
ಕಾಸರಗೋಡು, ಜು.6: ಕಾಸರಗೋಡಿನಲ್ಲಿ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ ನ್ನು ಸಂಭ್ರಮದಿಂದ ಆಚರಿಸಿದರು.
ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿಯುತ್ತಿದ್ದು, ಮಳೆಯನ್ನು ಲೆಕ್ಕಿಸದೆ ಮುಸ್ಲಿಂ ಬಾಂಧವರು ನಮಾಝ್ ನಲ್ಲಿ ಪಾಲ್ಗೊಂಡರು.
ಬಳಿಕ ಪರಸ್ಪರ ಹಸ್ತ ಲಾಘವ ಮತ್ತು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.
ಕಾಸರಗೋಡು, ಕುಂಬಳೆ, ಉಪ್ಪಳ, ಬದಿಯಡ್ಕ, ಚೆರ್ಕಳ, ಮಂಜೇಶ್ವರ ಮೊದಲಾದೆಡೆ ಮಸೀದಿಗಳಲ್ಲಿ ನಮಾಝ್ ಮತ್ತು ವಿಶೇಷ ಪ್ರಾರ್ಥನೆ ನಡೆಯಿತು.