×
Ad

ಮುಂದಿನ ಅವಧಿಗೆ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ: ಐವನ್

Update: 2016-07-06 12:54 IST

ಮಂಗಳೂರು, ಜು.6: ಮುಂದಿನ ಅವಧಿಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.

ವಿಧಾನಪರಿಷತ್ ಮುಖ್ಯ ಸಚೇತಕರಾಗಿ ಆಯ್ಕೆಯಾದ ಬಳಿಕ ಇಂದು ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಮಾತನಾಡಿದರು.    

ಸಮಾಜಸೇವೆಗಾಗಿ ರಾಜಕೀಯ ಮಾಡುತ್ತಾ ಬಂದಿದ್ದೇನೆ. ಅನೇಕ ಏರುಪೇರು ಆಗಿದೆ. ಸೋಲಿಗೆ ಹಿಂಜರಿಯಲಿಲ್ಲ.  ಸಮಸ್ಯೆ ಈಡೇರಿಸಲು ರಾಜಕೀಯ ವೇದಿಕೆಯಾಗಿ ಮಾಡಿದ್ದೇನೆ. ಪಕ್ಷ ಟಿಕೇಟು ಸಿಗದಾಗ ಪಕ್ಷಕ್ಕೆ ಹಾನಿ ಮಾಡಿದ್ದರೆ ಈ ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಅವಕಾಶ ಸಿಗಲಿಲ್ಲ ಎಂದು ಸುಮ್ಮನಿರದೆ ಪಕ್ಷಕ್ಕಾಗಿ ದುಡಿಯಬೇಕು ಎಂದರು 

ಬಿಜೆಪಿ ಧರ್ಮ, ಜಾತಿ ಆಧಾರದಲ್ಲಿ ವಿಭಜನೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಈ ರೀತಿ ಮಾಡುವುದಿಲ್ಲ ಎಂದರು. ವಿಧಾನಪರಿಷತ್ ಸದಸ್ಯ ನಾದ ನಂತರ ಬಡವರಿಗೆ ೩ ಕೋಟಿ ೪ ಲಕ್ಷ ಪರಿಹಾರವನ್ನು ತೆಗೆದು ಕೊಟ್ಟಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪ್ರ.ಕಾರ್ಯದರ್ಶಿ ಸದಾಶಿವ ಉಳ್ಳಾಲ್,  ಐವನ್ ಡಿಸೋಜ ಪತ್ನಿ ಡಾ. ಕವಿತಾ, ಎ.ಸಿ ಭಂಡಾರಿ, ಪದ್ಮನಾಭ ನರಿಂಗಾನ, ಮೇಯರ್ ಹರಿನಾಥ್ , ಕಾಂಗ್ರೆಸ್ ಮುಖಂಡರುಗಳಾದ ಸುಭೋದ್ ಆಳ್ವ, ವಿಜಯಕುಮಾರ್ ಸೊರಕೆ, ಹಾಜಿ ಯು.ಕೆ.ಮೋನು, ಸಂತೋಷ್, ಕಾರ್ಪೋರೇಟರ್  ಪ್ರವೀಣ್ ಚಂದ್ರ ಆಳ್ವ, ಎ. ಸಿ.ವಿನಯರಾಜ್, ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News