×
Ad

ಕಡಬ: ವಿವಿಧ ಮಸೀದಿಗಳಲ್ಲಿ ಈದುಲ್ ಫಿತ್ರ್ ಆಚರಣೆ

Update: 2016-07-06 13:44 IST

ಕಡಬ, ಜು.6: ಪರಿಸರದ ವಿವಿಧ ಮಸೀದಿಗಳಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್‌ನ್ನು ಅಚರಿಸಲಾಯಿತು.

ಮರ್ಧಾಳ ತಕ್ವೀಯತ್ತುಲ್ ಇಸ್ಲಾಂ ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಮಜೀದ್ ಸಖಾಫಿ ಮಲ್ಲಿ ಯವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಕಲ್ಲಾಜೆ ರಹ್ಮಾನಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತರ್‌ನ್ನು ಸಂಭ್ರಮದಿಂದ ಆಚರಿಸಲಾಯಿತು. ಖತೀಬ್ ಅಬ್ದುಲ್ ಅಝೀಝ್ ಲತೀಫಿ ನಮಾಝ್‌ಗೆ ನೇತೃತ್ವ ನೀಡಿದ್ದರು.

ನೆಟ್ಟಣ ಜುಮಾ ಮಸೀದಿಯಲ್ಲಿ ಇಮಾಮ್ ಅಬ್ದುಲ್ ಜಲೀಲ್ ಅರ್ಶದಿ ನೇತೃತ್ವದಲ್ಲಿ ಈದ್ ನಮಾಝ್ ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News