×
Ad

ಮಚ್ಚಂಪಾಡಿಯಲ್ಲಿ ಸಂಭ್ರಮದ ಈದ್ ಆಚರಣೆ

Update: 2016-07-06 14:01 IST

ಮಂಜೇಶ್ವರ, ಜು.6: ಮಚ್ಚಂಪಾಡಿಯಲ್ಲಿ ಪವಿತ್ರ ಈದುಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಚ್ಚಂಪಾಡಿ ಜುಮಾ ಮಸೀದಿಯಲ್ಲಿ ನಡೆದ ಈದ್ ವಿಶೇಷ ಪ್ರಾರ್ಥನೆಗೆ ಸ್ಥಳ ಮುದರ್ರಿಸ್ ಬಶೀರ್ ಬಾಖವಿ ನೇತೃತ್ವ ನೀಡಿದರು.

ಜಮಾಅತ್ ಸಮಿತಿ ಅಧ್ಯಕ್ಷ ಹುಸೈನಾರ್ ಹಾಜಿ, ಉಪಾಧ್ಯಕ್ಷ ಪಿ.ಎಚ್. ಅಬ್ದುಲ್ ಹಮೀದ್, ಪತ್ರಕರ್ತ ಆರಿಫ್ ಮಚ್ಚಂಪಾಡಿ, ಕೆ.ಎಂ.ಸಿ.ಸಿ ಮುಖಂಡರಾದ ಹುಸೈನ್ ಮಚ್ಚಂಪಾಡಿ, ರಝಾಕ್ ಕೇರಿ, ಮಚ್ಚಂಪಾಡಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಪದಾಧಿಕಾರಿಗಳಾದ ಇಸ್ಮಾಯೀಲ್, ಅಝೀಝ್ ಹಾಜಿ, ಇಬ್ರಾಹೀಂ. ಪಿ.ಪಿ., ಅಬ್ದುರ್ರಹ್ಮಾನ್ ಹಾಜಿ, ಗ್ರಾಮ ಪಂಚಾಯತ್ ಸದಸ್ಯ ಫೈಝಲ್ ಎಂ.ಬಿ., ಹಾಗೂ ಕಲೀಲ್ ಬಜಾಲ್, ಮಜೀದ್ ಇಡಿಯ ಸೇರಿದಂತೆ ನೂರಾರು ಮಂದಿ ಈದ್ ನಮಾಝ್‌ನಲ್ಲಿ ಪಾಲ್ಗೊಂಡರು.

ಈದ್ ಸಂದೇಶ ನೀಡಿದ ಬಶೀರ್ ಬಾಖವಿ ಈದ್ ಹಬ್ಬದ ಆಚರಣೆಗಳು ಇಸ್ಲಾಂ ಧರ್ಮದ ಚೌಕಟ್ಟಿನೊಳಗೆ ಸೀಮಿತವಾಗಿರಬೇಕು. ಹಾಗಿದ್ದಲ್ಲಿ ಮಾತ್ರ ಒಂದು ತಿಂಗಳ ಉಪವಾಸ ಕ್ಕೆ ಫಲ ಸಿಗಲು ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News