ಅಬ್ದುಲ್ ರಝಾಕ್ ಮಿಸ್ಬಾಹಿರವರಿಗೆ ಬೀಳ್ಕೊಡುಗೆ
Update: 2016-07-06 15:29 IST
ಕಾಸರಗೋಡು ಜಿಲ್ಲೆಯ ಪೈವಳಿಕೆ ಸಮೀಪದ ಸುಂಕದಕಟ್ಟೆ ಬದ್ರಿಯಾ ಜುಮಾ ಮಸೀದಿಯಲ್ಲಿ ಕಳೆದ 17 ವರ್ಷಗಳಿಂದ ಮುದರ್ರಿಸ್ ಆಗಿ ಸೇವೆ ಸಲ್ಲಿಸಿ ಇದೀಗ ಸ್ವಯಂ ನಿವೃತಿ ಪಡೆದ ಅಬ್ದುಲ್ ರಝಾಕ್ ಮಿಸ್ಬಾಹಿ ಉಸ್ತಾದರನ್ನು ಈದ್ ನಮಾಝ್ ಬಳಿಕ ಜಮಾಅತ್ ವತಿಯಿಂದ ಬೀಳ್ಕೊಡಲಾಯಿತು.
17 ವರ್ಷಗಳ ಕಾಲ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬ್ ಹಾಗೂ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ ಇವರು ಜಮಾಅತ್ ನಾದ್ಯಂತ ಮಿಸ್ಬಾಹಿ ಉಸ್ತಾದ್ ಎಂದೇ ಖ್ಯಾತರಾಗಿದ್ದರು. ಹಲವು ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡಿರುವ ಇವರಿಗೆ ಅಪಾರ ಶಿಷ್ಯ ವೃಂದವಿದೆ. ತಮ್ಮ ಸೇವೆಯ ಅವಧಿಯಲ್ಲಿ ಊರಿನ ಶ್ರೇಯೋಬಿವೃದ್ಧಿಗಾಗಿ ಶ್ರಮಿಸಿದ್ದವರು.