×
Ad

ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಈದುಲ್ ಫಿತ್ರ್ ಆಚರಣೆ

Update: 2016-07-06 19:04 IST

ಉಪ್ಪಿನಂಗಡಿ, ಜು.6: ಆತ್ಮ ಶುದ್ಧೀಕರಣ ಮತ್ತು ಪರಸ್ಪರ ಸಹೋದತೆ, ಶಾಂತಿ, ಐಕ್ಯತೆಯ ಪ್ರತೀಕ ಎಂದು ಬಿಂಬಿತವಾಗಿರುವ ಮುಸ್ಲಿಮರ ಪವಿತ್ರ ಈದುಲ್ ಫಿತ್ರ್ ಯಾ ಪೆರ್ನಾಳ್ ಹಬ್ಬವನ್ನು ಆತೂರು ಪರಿಸರದ ಮಂದಿ ಸಡಗರ ಸಂಭ್ರಮದೊಂದಿಗೆ ಆಚರಿಸಿದರು.

ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ಮತ್ತು ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹನೀಫ್ ಪೈಝಿ ನೇತೃತ್ವದಲ್ಲಿ ವಿಶೇಷ ನಮಾಝ್ ಮತ್ತು ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.

ಬದ್ರಿಯಾ ಜುಮಾ ಮಸೀದಿಯಲ್ಲಿ ನಮಾಝ್ ನಡೆದ ಬಳಿಕ ಮೆರವಣಿಗೆಯಲ್ಲಿ ಮೊಹಿಯುದ್ದೀನ್ ಮಸೀದಿಗೆ ತೆರಳಿ ಅಲ್ಲಿ ಎರಡೂ ಜಮಾಅತಿನ ಬಾಂಧವರು ಸಮಾಗಮಗೊಂಡರು. ಬಳಿಕ ನಡೆದ ಸಮಾರಂಭದಲ್ಲಿ ಜುನೈದ್ ತಂಙಳ್ ಶುಭಾಶಯ ಕೋರಿ ಮಾತನಾಡಿ ಕಳೆದ 1 ತಿಂಗಳಿನಿಂದ ಮಾಡಿದ ಪ್ರಾರ್ಥನೆ, ಸತ್ಕರ್ಮಗಳು ಮುಂದಿನ ದಿನಗಳಿಗೆ ಪ್ರೇರಣೆಯಾಗಲಿ. ಆ ಮೂಲಕ ಶಾಂತಿ, ಸೌಹಾರ್ದತೆ, ಐಕ್ಯತೆ ಎಲ್ಲೆಡೆ ನೆಲೆಗೊಳ್ಳಲಿ ಎಂದು ಸಂದೇಶ ಸಾರಿದರು.

ಮೊಹಿಯುದ್ದೀನ್ ಮಸೀದಿಯ ಖತೀಬ್ ಹನೀಫ್ ಪೈಝಿ ಮಾತನಾಡಿ, ಹಬ್ಬದ ಸಂದೇಶ ಸಾರಿದರು. ಮಸೀದಿಯಲ್ಲಿ ನಡೆದ ನಮಾಝ್, ಪ್ರಾರ್ಥನೆಯ ಬಳಿಕ ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಗಂಡಿಬಾಗಿಲಿನ ಕುತುಬಿಯಾ ಜುಮಾ ಮಸೀದಿಯಲ್ಲಿ ಖತೀಬ್ ಹಾದಿ ಅನಸ್ ತಂಙಳ್‌ರ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ನಡೆದು ವಿಶೇಷ ಪ್ರಾರ್ಥನೆ ನಡೆಯಿತು.

ಕೆಮ್ಮಾರದ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಮಜೀದ್ ಸಖಾಫಿಯವರ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ನಡೆದು ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.

ಉಪ್ಪಿನಂಗಡಿಯ ಕೇಂದ್ರ ಜುಮಾ ಮಸೀದಿಯಲ್ಲಿ ಮಸೀದಿಯ ಮುದರ್ರಿಸ್ ಅಬ್ದುಲ್ ಸಲಾಂ ಪೈಝಿ ಎಡಪ್ಪಾಲ್ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ನಡೆದು ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶ ವಿನಿಮಯ ಮಾಡಿಕೊಂಡರು.

ಪೆರಿಯಡ್ಕದ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಖತೀಬ್ ಇಸ್ಮಾಯಿಲ್ ಮುಸ್ಲಿಯಾರ್ ಪೆರಿಯಡ್ಕ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ನಡೆದು ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.

ಹಿರೇಬಂಡಾಡಿಯ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುರ್ರಝಾಕ್ ಪೈಝಿ ನೇತೃತ್ವದಲ್ಲಿ ನಮಾಝ್ ಮತ್ತು ಖುತ್ಬಾ ನಡೆದು ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಆಲಂಗಿಸಿಕೊಂಡು ಹಬ್ಬದ ಸಂದೇಶವನ್ನು ವಿನಿಮಯ ಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News