ಉಡುಪಿ: ಡೆಂಗ್‌ಗೆ ಯುವಕ ಬಲಿ

Update: 2016-07-06 14:23 GMT

ಉಡುಪಿ, ಜು.16: ಡೆಂಗ್ ಜ್ವರದಿಂದ ಬಳಲುತ್ತಿದ್ದ ಪರ್ಕಳದ ದೇವಿ ನಗರದ ನಿವಾಸಿ ಸುದೇವ್ ಶೆಣೈ (25) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಡೆಂಗ್ ಜ್ವರದಿಂದ ಬಳಲುತ್ತಿದ್ದ ಸುದೇವ್‌ರನ್ನು ಜು.2ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ.

ಪ್ರತಿಭಾವಂತ ವಿದಾರ್ಥಿಯಾಗಿದ್ದ ಶೆಣೈ, ಮಣಿಪಾಲದ ಪಾಲಿಟೆಕ್ನಿಕ್ ನಲ್ಲಿ ಒಂದು ವರ್ಷದ ತನಕ ಉದ್ಯೋಗದಲ್ಲಿದ್ದು, ತದನಂತರ ನಿಟ್ಟೆಯಲ್ಲಿ ಎಂ.ಟೆಕ್(ಇಂಟರ್ನ್‌ಶಿಪ್) ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಮೃತರು ಪತ್ನಿ, ತಾಯಿ, ತಮ್ಮನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News