×
Ad

ರೈಲಿನ ಟಾಯ್ಲೆಟ್‌ನಲ್ಲಿ ಪ್ಯಾಂಟ್‌ನಿಂದ ನೇಣುಬಿಗಿದು ಆತ್ಮಹತ್ಯೆ

Update: 2016-07-06 22:37 IST

ಮಂಗಳೂರು, ಜು.6: ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಮಂಗಳವಾರ ರಾತ್ರಿ 11:30ಕ್ಕೆ ಬಂದ ಎಗ್ಮೂರು- ಚೆನ್ನೈ ರೈಲಿನ ಜನರಲ್ ವಾರ್ಡ್‌ನ ಶೌಚಾಲಯದಲ್ಲಿ ಧರಿಸಿದ್ದ ಪ್ಯಾಂಟ್‌ನಲ್ಲೇ ನೇಣು ಹಾಕಿಕೊಂಡು ಮೃತಪಟ್ಟ ಅಪರಿಚಿತ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ.

ನೇಣು ಹಾಕಿಕೊಂಡ ವ್ಯಕ್ತಿಯು ತಮಿಳುನಾಡು ಮೂಲದವನೆಂದು ಅಂದಾಜಿಸಲಾಗಿದ್ದು, ಈತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ನಿಂತ ರೈಲಿನ ಒಂದು ಬೋಗಿಯಲ್ಲಿ ಕಡೆಯಲ್ಲಿ ಶೌಚಾಲಯದ ಬಾಗಿಲನ್ನು ಒಳಗಿನಿಂದಲೇ ಮುಚ್ಚಲಾಗಿತ್ತು. ಕಿಟಕಿ ಮೂಲಕ ವೀಕ್ಷಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದುಬಂದಿದೆ.

ಅಪರಿಚಿತ ವ್ಯಕ್ತಿಯು ರೈಲು ಸಾಗುತ್ತಿರುವಾಗಲೇ ಶೌಚಾಲಯದ ಬಾಗಿಲಿಗೆ ಚಿಲಕ ಹಾಕಿದ್ದು, ಬಟ್ಟೆಯಲ್ಲಿ ಸುತ್ತಿ ಇನ್ನಷ್ಟು ಭದ್ರಗೊಳಿಸಿದ್ದ. ಬಳಿಕ ತಾನು ಧರಿಸಿದ್ದ ಜೀನ್ಸ್ ಪ್ಯಾಂಟ್ ಅನ್ನೇ ನೀರಿನ ವಾಷರ್ ಪೈಪ್‌ಗೆ ಸಿಕ್ಕಿಸಿ ಕುತ್ತಿಗೆಗೆ ಬಿಗಿದುಕೊಂಡು ಶೌಚಾಲಯದ ಗುಂಡಿಯೊಳಗೆ ಹಾರಿದ್ದಾನೆ. ಈ ವೇಳೆ ಒಂದು ಕಾಲು ಸಿಲುಕಿಕೊಂಡಿದ್ದು, ತೀವ್ರ ಒದ್ದಾಡಿದ್ದಾನೆಂದು ತಿಳಿದುಬಂದಿದೆ.

ಮೃತನು ಎಣ್ಣೆಗೆಂಪು ಮೈ ಬಣ್ಣ, ದುಂಡು ಮುಖ, ಉದ್ದ ಮೂಗು, ಸಾಧಾರಣ ಮೈ ಕಟ್ಟು ಹೊಂದಿದ್ದು, ಜೀನ್ ಪ್ಯಾಂಟ್ ಹಾಗೂ ಕಪ್ಪು ಹಾಗೂ ಬಿಳಿ ಮಿಶ್ರಿತ ಟೀ ಶರ್ಟ್ ಅನ್ನು ಧರಿಸಿದ್ದ. ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News