ನೀರುಪಾಲಾದ ಯುವಕರಿಗಾಗಿ ಶೋಧ
Update: 2016-07-06 23:01 IST
ಮಂಗಳೂರು, ಜು.6: ಮರವೂರು ಲ್ಗುಣಿ ನದಿ ಡ್ಯಾಂನಲ್ಲಿ ಮಂಗಳವಾರ ನೀರು ಪಾಲಾದ ಮೂಡುಶೆಡ್ಡೆಯ ಅವಿನಾಶ್ (26) ಹಾಗೂ ಜೈಸನ್ (24) ಅವರನ್ನು ಹುಡುಕಲು ಶೋಧ ಕಾರ್ಯಾಚರಣೆ ಬುಧವಾರವೂ ಮುಂದುವರಿದಿದೆ.
ಬುಧವಾರ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಹಾಗೂ ಇಲ್ಲಿನ ಪರಿಸರದಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಜೈಸನ್ ಹಾಗೂ ಅವಿನಾಶ್ ಇತರ 6 ಮಂದಿ ಗೆಳೆಯರೊಂದಿಗೆ ಮಧ್ಯಾಹ್ನ ಮರವೂರು ಡ್ಯಾಂ ಸಮೀಪ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದು, ಜೈಸನ್ ನದಿಗೆ ಇಳಿದಿದ್ದ. ಈ ವೇಳೆ ಆತ ನೀರಿನ ಸೆಳೆತಕ್ಕೆ ಸಿಲುಕಿ ರಕ್ಷಣೆಗೆ ಬೊಬ್ಬೆ ಹಾಕಿದ್ದು, ಆತನ ರಕ್ಷಣೆಗೆ ಧಾವಿಸಿದ ಅವಿನಾಶ್ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು ಎನ್ನಲಾಗಿದೆ.