×
Ad

ದೇರಾಜೆ: ವನಮಹೋತ್ಸವ ಮತ್ತು ಬೀಜ ಬಿತ್ತನೆ ಕಾರ್ಯಕ್ರಮ

Update: 2016-07-08 17:19 IST

ಕಡಬ, ಜು.8: ದೇರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಹಾಗೂ ಬೀಜ ಬಿತ್ತನೆ ಕಾರ್ಯಕ್ರಮವು ಶುಕ್ರವಾರ ನಡೆಯಿತು. ದೇರಾಜೆ ಗ್ರಾ.ಪಂ. ಸದಸ್ಯರಾದ ಜಾನಕಿ, ಮುಹಮ್ಮದ್ ಅಲಿ, ದೇವಯ್ಯ ಪನ್ಯಾಡಿ ಜಂಟಿಯಾಗಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಹಸಿರೇ ಉಸಿರು‘ ಎಂಬುವುದು ಪ್ರತಿಯೊಬ್ಬರ ಧ್ಯೇಯ ವಾಕ್ಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಧ್ಯೇಯ ವಾಕ್ಯವನ್ನು ಗಮನದಲ್ಲಿಟ್ಟುಕೊಂಡರೆ ನಮ್ಮ ಭಾರತ ದೇಶದಲ್ಲಿ ಹಸಿರು ಕ್ರಾಂತಿ ಸೃಷ್ಠಿಯಾಗಲು ಸಾಧ್ಯ ಎಂದು ಉಪ ಅರಣ್ಯಧಿಕಾರಿ ರಾಜೇಶ್ ಎಸ್. ತಿಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ದುರ್ಗಾವತಿ, ಗ್ರಾ.ಪಂ. ಮಾಜಿ ಸದಸ್ಯ ಕೃಷ್ಣಪ್ಪದೇವಾಡಿಗ, ಅರಣ್ಯ ರಕ್ಷಕರಾದ ರವೀಂದ್ರ, ಸುಬ್ರಹ್ಮಣ್ಯ, ಭೀಮಪ್ಪ, ಅರಣ್ಯ ವೀಕ್ಷಕ ಜನಾರ್ದನ, ಶಾಲಾ ಮುಖ್ಯೋಪಾಧ್ಯಾಯ ಪೂವಪ್ಪಗೌಡ ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News