ಕೆಯ್ಯೂರು: ವನಮಹೋತ್ಸವ ಕಾರ್ಯಕ್ರಮ
Update: 2016-07-08 19:16 IST
ಪುತ್ತೂರು, ಜು.8: ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಪಂ ಹಾಗೂ ಪುತ್ತೂರು ಅರಣ್ಯ ಇಲಾಖೆಯ ವತಿಯಿಂದ ಶುಕ್ರವಾರ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಗ್ರಾ.ಪಂ. ಅಧ್ಯಕ್ಷ ಬಾಬು ಸಸಿನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮದ ಪ್ರತಿಯೊಬ್ಬ ಕುಟುಂಬವೂ ಗಿಡಗಳನ್ನು ಪ್ರೀತಿಸುವ ಮನಸ್ಸು ಉಳ್ಳವರಾಗಬೇಕು. ಎಲ್ಲರೂ ತಮ್ಮ ಮನೆಗಳಲ್ಲಿ ಮನಮಹೋತ್ಸವ ಆಚರಣೆ ಮಾಡಿದರೆ ಮಾತ್ರ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ಪಂಚಾಯತ್ ಕಾರ್ಯದರ್ಶಿ ಸುಬ್ರಹ್ಮಣ್ಯ, ಉಪಾಧ್ಯಕ್ಷ ರಾಧಾಕೃಷ್ಣ ಗೌಡ, ಗ್ರಾ.ಪಂ. ಸದಸ್ಯರಾದ ಎ.ಕೆ. ಜಯರಾಂ ರೈ, ಮೋಹನ್ ರೈ, ಹರಿಣಾಕ್ಷಿ, ಸುಮಿತ್ರಾ, ಲಾವಣ್ಯ, ರಾಕಾ, ಮಮತಾ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ಕೆಲವು ಕಡೆಗಳಲ್ಲಿ ಗಿಡಗಳನ್ನು ನೆಡಲಾಯಿತು.