×
Ad

ಉಳ್ಳಾಲ ದರ್ಗಾಕ್ಕೆ ಐವನ್ ಡಿಸೋಜ ಭೇಟಿ

Update: 2016-07-08 22:45 IST

ಉಳ್ಳಾಲ, ಜು. 8: ವಿಧಾನಪರಿಷತ್‌ನ ಮುಖ್ಯ ಸಚೇತಕರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಐವನ್ ಡಿಸೋಜ ಅವರು ಇಂದು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಉಳ್ಳಾಲ, ಉಪಾಧ್ಯಕ್ಷ ಯು.ಕೆ ಮೋನು ಕೋಟೆಪುರ, ಉಪಾಧ್ಯಕ್ಷ ಬಾವ ಮುಹಮ್ಮದ್, ಮದನಿನಗರ, ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್ ಹಳೆಕೋಟೆ, ಜೊತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ, ಕೋಶಾಧಿಕಾರಿ ಯು.ಕೆ ಇಲ್ಯಾಸ್ ಪೇಟೆ, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್ ತೋಟ, ಉಳ್ಳಾಲ ನಗರ ಸಭಾ ಅಧ್ಯಕ್ಷ ಕುಂಞಿಮೋನು ಹುಸೈನ್, ಪುರಸಭಾ ಸದಸ್ಯರಾದ ಮುಸ್ತ ಅಬ್ದುಲ್ಲ, ಮಾಜಿ ಪುರಸಭಾ ಸದಸ್ಯ ಡೆನ್ನಿಸ್ ಡಿ.ಸೋಜ, ಪುರಸಭಾ ಮಾಜಿ ಉಪಾಧ್ಯಕ್ಷ ದಿನೇಶ್ ರೈ, ದರ್ಗಾ ಸಮಿತಿಯ ಸದಸ್ಯರಾದ, ಎ.ಕೆ ಮೊಹಿಯುದ್ದೀನ್, ಯು.ಎಚ್ ಮುಹಮ್ಮದ್, ಯು.ಪಿ ಅಬ್ಬಾಸ್, ಆಸ್ಿ ಅಬ್ದುಲ್ಲ, ಾರೂಕ್ ಉಳ್ಳಾಲ್, ಹಮೀದ್ ಕೋಡಿ, ಕೆ.ಎನ್. ಮುಹಮ್ಮದ್, ಅಬೂಬಕ್ಕರ್, ಅಬ್ದುಲ್ ರಹ್ಮಾನ್ ಅದ್ದ, ಮೊಯ್ದಿನಬ್ಬ ಉಳ್ಳಾಲ ಬೈಲ್, ಮಾಜಿ ಪುರಸಭಾ ಅಧ್ಯಕ್ಷ ಬಾಝಿಲ್ ಡಿ.ಸೋಜ, ಯು.ಎ ಇಸ್ಮಾಯಿಲ್, ಮಾಜಿ ದರ್ಗಾ ಸದಸ್ಯ ಮುಸ್ತಫಾ ಎವರೆಸ್ಟ್, ಕಬೀರ್ ಚಾಯಬ್ಬ ಹಾಗೂ ಸುರೇಶ್ ಭಟ್ನಗರ್, ದೀಪಕ್ ಪಿಲಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿಸೋಜಾ, ಸರಕಾರ ಉನ್ನತವಾದ ಜವಾಬ್ದಾರಿಯನ್ನು ನೀಡಿದ್ದು,ಎಲ್ಲರ ಹಾರೈಕೆಯಿಂದ ನನಗೆ ಈ ಪದವಿ ಸಿಕ್ಕಿದೆ. ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತೇನೆ ಎಂದರು.

ಉಳ್ಳಾಲ ದರ್ಗಾ ಸೌಹಾದರ್ದ ಕೇಂದ್ರವಾಗಿದ್ದು ಇಲ್ಲಿಗೆ ಸರ್ವಧರ್ಮದವರು ಭೇಟಿ ನೀಡುತ್ತಿದ್ದಾರೆ. ದರ್ಗಾದವರು ಇಟ್ಟಿರುವ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News