ಡೆಂಗ್‌ಗೆ ನಿವೃತ್ತ ಪಿಡಿಒ ಬಲಿ
Update: 2016-07-08 23:32 IST
ಬೆಳ್ತಂಗಡಿ, ಜು.8: ಗೇರುಕಟ್ಟೆ ಸಂಬೊಳ್ಯ ನಿವಾಸಿ, ನಿವೃತ್ತ ಪಿಡಿಒ ವೈಕುಂಠ ಬೈಪಡಿತ್ತಾಯ (63) ಶಂಕಿತ ಡೆಂಗ್‌ಗೆ ಬಲಿಯಾಗಿದ್ದಾರೆ. ಕೆಲವು ದಿನಗಳಿಂದ ಇವರು ಜ್ವರದಿಂದ ಬಳಲುತ್ತಿದ್ದರು. ಸ್ಥಳೀಯವಾಗಿ ಚಿಕಿತ್ಸೆ ಪಡೆದಿದ್ದರು. ಜ್ವರ ಕಡಿಮೆಯಾಗದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರು. ಆದರೆ ಆ ವೇಳೆಗೆ ಜ್ವರ ಹೆಚ್ಚಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.