×
Ad

ಮಕ್ಕಳ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2016-07-08 23:58 IST

ಉಡುಪಿ, ಜು.8: 2016ನೆ ಸಾಲಿನ ಮಕ್ಕಳ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ (ಐಸಿಸಿಡಬ್ಲ್ಯೂ) ಅರ್ಹ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಘಟನೆ ನಡೆದ ಸಂದರ್ಭದಲ್ಲಿ 6ರಿಂದ 18 ವರ್ಷದೊಳಗಿನವರಾಗಿದ್ದು, ಅಪೂರ್ವ ಧೈರ್ಯ ಸಾಹಸಗಳನ್ನು ಪ್ರದರ್ಶಿಸಿ ಪ್ರಾಣಾಪಾಯದ ಸನ್ನಿವೇಶದಲ್ಲೂ ದಿಟ್ಟತನದಿಂದ ಇತರರ ಪ್ರಾಣ ರಕ್ಷಣೆ ಮಾಡಿದವರು ಅಥವಾ ದುಷ್ಟಶಕ್ತಿಗಳ/ಅಪರಾಧಗಳ ವಿರುದ್ಧ ಧೈರ್ಯದಿಂದ ಹೋರಾಡಿದವರಾಗಿರಬೇಕು. ರ ಜುಲೈ 1ರಿಂದ 2016ರ ಜೂನ್ 30ರೊಳಗೆ ನಡೆದಿರುವ ಘಟನೆಯಾಗಿರಬೇಕು. ಪರಿಷತ್ತು ನಿರ್ದಿಷ್ಟಪಡಿಸಿದ ಯಾವುದಾದರು ಎರಡು ಸಕ್ಷಮ ಪ್ರಾಧಿಕಾರದಿಂದ ಶಿಫಾರಸು ಪಡೆದಿರಬೇಕು. ಅರ್ಜಿಯಲ್ಲಿ ಅಭ್ಯರ್ಥಿ ಪ್ರದರ್ಶಿಸಿದ ಶೌರ್ಯದ ಬಗ್ಗೆ 250 ಪದಗಳಲ್ಲಿ ಇಂಗ್ಲಿಷ್ ಹಿಂದಿಯಲ್ಲಿ ಘಟನೆ ವಿವರ, ದೃಢೀಕೃತ ಜನನ ಪ್ರಮಾಣ ಪತ್ರ, ದಿನಪತ್ರಿಕೆ/ಮ್ಯಾಗ್‌ಝಿನ್‌ಗಳಲ್ಲಿ ಪ್ರಕಟವಾಗಿರುವ ಘಟನೆಯ ವಿವರ ಅಥವಾ ಆರಕ್ಷಕ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಹಾಗೂ ಪೂರಕ ದಾಖಲೆಗಳನ್ನು ಹೊಂದಿರಬೇಕು. ಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಶಸ್ತಿ ಫಲಕ, ನಗದು ಬಹುಮಾನ ಹಾಗೂ ಇನ್ನಿತರ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುವುದು. ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಪ್ರಸ್ತಾವಗಳನ್ನು ದ್ವಿಪ್ರತಿಗಳಲ್ಲಿ ಸೆ.30ರೊಳಗೆ ಪ್ರಧಾನ ಕಾರ್ಯದರ್ಶಿಗಳು, ಕರ್ನಾಟಕ ರಾಜ್ಯ ಶಿಶು ಕಲ್ಯಾಣ ಸಂಸ್ಥೆ, ನಂ.135, 3ನೆ ಅಡ್ಡ ರಸ್ತೆ, ನಂದಿ ದುರ್ಗ ರಸ್ತೆ, ಜಯಮಹಲ್ ಬಡಾವಣೆ ಬೆಂಗಳೂರು -560046 ಇವರಿಗೆ ನೇರವಾಗಿ ಕಳುಹಿಸಬೇಕು.

ನಿಗದಿತ ಅರ್ಜಿ ನಮೂನೆಗಾಗಿ ಹಾಗೂ ವಿವರಗಳಿಗಾಗಿ ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಜತಾದ್ರಿ, ಬಿ ಬ್ಲಾಕ್, ಮೊದಲನೆ ಮಹಡಿ-ಮಣಿಪಾಲ ಇವರನ್ನು ಅಥವಾ ದೂ.ಸಂ: 0820-2574902ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News