×
Ad

ಕಡಬ: ರಸ್ತೆ ಮಧ್ಯೆ ಬಾಳೆಗಿಡ ಪ್ರತ್ಯಕ್ಷ!

Update: 2016-07-09 09:59 IST

ಕಡಬ, ಜು.9: ಉಪ್ಪಿನಂಗಡಿ  ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಎಂಬಲ್ಲಿ ರಸ್ತೆ ಮಧ್ಯದ ಹೊಂಡದಲ್ಲಿ ಬಾಳೆಗಿಡ ನೆಟ್ಟ ಘಟನೆ ವರದಿಯಾಗಿದೆ.

ಮಳೆಯ ನೀರು ನಿಂತು ಗುಂಡಿಯ ಆಳ ತಿಳಿಯದಿರುವುದರಿಂದ ಬೈಕ್ ಸವಾರರು ಸೇರಿದಂತೆ ವಾಹನ ಚಾಲಕರು ಅಕಸ್ಮಾತಾಗಿ ಗುಂಡಿಗೆ ವಾಹನವನ್ನು ಇಳಿಸಿ ಪರದಾಡುತ್ತಿದ್ದರು.

ಇದನ್ನು ಮನಗಂಡು ಸ್ಥಳೀಯರು ಬಾಳೆಗಿಡವನ್ನು ನೆಟ್ಟು ವಿನೂತನ ರೀತಿಯಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರುವ ಪ್ರಯತ್ನವನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News