×
Ad

ಹದಗೆಟ್ಟ ರಸ್ತೆಗೆ ಗ್ರಾಮಸ್ಥರಿಂದಲೇ ಕಾಯಕಲ್ಪ

Update: 2016-07-09 10:14 IST

ಕಡಬ, ಜು.9: ತೀರಾ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದ್ದ ನೀರಾಜೆ ಮುಂಡ್ರಾಡಿ ರಸ್ತೆಯನ್ನು ಊರವರು ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು.

ಕೆಸರಿನಿಂದ ತುಂಬಿದ್ದ ರಸ್ತೆಗೆ ಕಲ್ಲು ಮಣ್ಣು ಹಾಕಿ ಸಮತಟ್ಟುಗೊಳಿಸಿ ತಕ್ಕಮಟ್ಟಿಗೆ ದುರಸ್ತಿಗೊಳಿಸಲಾಯಿತು.

ಸ್ಥಳೀಯರಾದ ಶ್ರೀನಿವಾಸ್ ರೈ ಮುಂಡ್ರಾಡಿ ಹಾಗೂ ಮನೋಹರ್ ರೈ ಪಟ್ಟೆಯವರ ಮುಂದಾಳತ್ವದಲ್ಲಿ ಶ್ರಮದಾನವು ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News