×
Ad

ರಮಝಾನ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಫ್ ಹಳೆಕೋಟೆ ವತಿಯಿಂದ ಹಲವು ಕಾರ್ಯಕ್ರಮಗಳು

Update: 2016-07-09 15:19 IST

ಉಳ್ಳಾಲ, ಜು.9: ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ಹಳೆಕೋಟೆ ಶಾಖೆ ಉಳ್ಳಾಲದ ವತಿಯಿಂದ ಹಮ್ಮಿಕೊಂಡ ‘ಸ್ವರ್ಗ ಕರೆಯುತ್ತಿದೆ’ ಅಭಿಯಾನದಂಗವಾಗಿ ರಮಝಾನ್ ತಿಂಗಳಲ್ಲಿ ಹಲವು ಕಾರ್ಯಕ್ರಮಗಳು ನಡೆದವು.

ಬದ್ರ್ ಅನುಸ್ಮರಣೆ ಪ್ರಯುಕ್ತ ತವಸ್ಸುಲ್ ಸಂಗಮ ಶಾಖಾ ಕಚೇರಿಯಲ್ಲಿ ಜರಗಿತು. ಕಬೀರ್ ಸಅದಿ ಮಿಲ್ಲತ್ ನಗರ ಪ್ರಭಾಷಣಗೈದರು. ರಾಜ್ಯ ಸಮಿತಿಯ ವತಿಯಿಂದ ರಾಜ್ಯ ಮಟ್ಟದಲ್ಲಿ ನಡೆಯಲಿರುವ ಬೃಹತ್ ಮುತಲ್ಲಿಂ ಸಂಗಮದ ಪೂರ್ವಭಾವಿಯಾಗಿ ಶಾಖಾ ಧಾರ್ಮಿಕ ವಿದ್ಯಾರ್ಥಿಗಳ ಸಂಗಮ ಉಸ್ಮಾನ್ ಸಖಾಫಿಯವರ ನೇತೃತ್ವದಲ್ಲಿ ನಡೆಯಿತು.

ಮಾಧ್ಯಮ ಮುಖ್ಯಸ್ಥ ಅಬೂ ಪಹದ್ ಹಸನ್ ಅಮ್ಜದಿ ಕಾರ್ಯಕ್ರಮ ಉದ್ಘಾಟಿಸಿದರು. ಸುನೈಫ್ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೆರ್ನಾಳ್ ರಾತ್ರಿ ಎಸ್ಸೆಸ್ಸೆಫ್ ಶಾಖಾ ಕಚೇರಿಯಲ್ಲಿ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು. ಲದಲ್ ಹಬೀಬ್ ಬುರ್ದಾ ಇಖ್ವಾನ್ ಅಳೇಕಲ ಬುರ್ದಾ ನಡೆಸಿಕೊಟ್ಟರು. ಸಿದ್ದೀಕ್ ಹಳೆಕೋಟೆ ನೇತೃತ್ವ ವಹಿಸಿದರು.

ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಶಾಖಾಧ್ಯಕ್ಷ ಮುಹಮ್ಮದ್ ಮದನಿ ವಹಿಸಿದರು. ಸೈಯದ್ ಜವಾದ್ ತಂಙಳ್, ತೌಫೀಕ್ ಸಅದಿ, ಫಯಾಝ್ ಉಸ್ತಾದ್, ಶಪೀಕ್ ಉಸ್ತಾದ್, ಶಾಖಾ ಕೋಶಾಧಿಕಾರಿ ಉಮರ್ ತಲ್ಹತ್, ಉಪಾಧ್ಯಕ್ಷ ಅಬ್ದುಲ್ ಸಮದ್, ಶರೀಫ್ ಯು.ಕಾಂ, ಕೆಐ ಇಮ್ರಾನ್ ಉಪಸ್ಥಿತರಿದ್ದರು. ಶಾಖಾ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News