ಕಲಾಯಿ: ಟಿಪ್ಪು ಸುಲ್ತಾನ್ ಫೌಂಡೇಶನ್‌ನಿಂದ ಇಫ್ತಾರ್ ಕೂಟ, ಬೀಳ್ಕೊಡುಗೆ ಕಾರ್ಯಕ್ರಮ
Update: 2016-07-09 15:34 IST
ಮಂಗಳೂರು, ಜು.9: ಟಿಪ್ಪುಸುಲ್ತಾನ್ ಫೌಂಡೇಶನ್ (ರಿ) ಕಲಾಯಿ ಇದರ ವತಿಯಿಂದ ಇಫ್ತಾರ್ ಕೂಟ, ಮದೀನ ಜುಮ್ಮಾ ಮಸೀದಿಯ ಖತೀಬ್ ಅಲ್ ಹಾಜೀ ಬಶಿರ್ ಮದನಿ ಯವರಿಗೆ ಬೀಳ್ಕೊಡುಗೆ ಮತ್ತು ಮದರಸ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಮದ್ರಸದ 2 ವಿದ್ಯಾರ್ಥಿನಿಯಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಮದೀನಾ ಮಸ್ಜಿದ್ ಹಾಲ್‌ನಲ್ಲಿ ನಡೆಯಿತು.
ಸಂಸ್ಥೆಯ ಗೌರವಾಧ್ಯಕ್ಷ ಕೆ.ಯಾಕೂಬ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಅಶ್ರಫ್, ಮದೀನಾ ಜುಮಾ ಮಸೀದಿಯ ಕಾರ್ಯದರ್ಶಿ ಇಮ್ತಿಯಾಝ್, ಕೆ. ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.
ಎಸ್.ಎಚ್.ಬಿ. ಕಲಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಇಮ್ತಿಯಾಝ್ ಕಲಾಯಿ ವಂದಿಸಿದರು.