×
Ad

ಕಡಬ: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ರಸ್ತೆತಡೆ, ಧರಣಿ

Update: 2016-07-09 15:54 IST

ಕಡಬ, ಜು.9: ಮಂಗಳೂರು ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೊಳಪಡಿಸಬೇಕೆಂದು ಹಾಗೂ ಆರೋಪಿಸಲಾದ ಪ್ರಮುಖ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಕಡಬ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಡಬ ಪೇಟೆಯಲ್ಲಿ ರಸ್ತೆ ತಡೆ ನಡೆಸಿ ಧರಣಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸತೀಶ್ ನಾಯ್ಕ್, ಸೀತಾರಾಮ ಗೌಡ ಪೊಸವಳಿಕೆ, ಮನೋಹರ್ ರೈ, ಪುಲಸ್ತ್ಯಾ ರೈ, ಆದಂ ಕುಂಡೋಳಿ, ಫಯಾಝ್ ಕೆನರಾ, ಶಿವಪ್ರಸಾದ್ ರೈ ಮೈಲೇರಿ, ಹಿಂದೂ ಸಂಘಟನೆಯ ಮುಖಂಡರಾದ ರವಿರಾಜ ಶೆಟ್ಟಿ, ಪ್ರಕಾಶ್ ಎನ್.ಕೆ., ಸುರೇಶ್ ದೇಂತಾರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News