ತಮಿಳುನಾಡಿನ ಪ್ರವಾಸಿಗ ಕುಂಬಳೆಯಲ್ಲಿ ಸಮುದ್ರಪಾಲು
Update: 2016-07-09 17:16 IST
ಕಾಸರಗೋಡು, ಜು.9: ತಮಿಳುನಾಡಿನಿಂದ ಪ್ರವಾಸಕ್ಕೆ ಬಂದಿದ್ದ ತಂಡದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂಬಳೆ ಶಿರಿಯಾದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ಯುವಕನನ್ನು ತಮಿಳುನಾಡಿನ ಮುಹಮ್ಮದ್ ರಫೀಕ್ (35) ಎಂದು ಗುರುತಿಸಲಾಗಿದೆ.
ತಮಿಳುನಾಡಿನ ಕಂಪೆನಿಯೊಂದರ ಸಿಬ್ಬಂದಿಯಾಗಿದ್ದ ರಫೀಕ್ ಮತ್ತು ಇತರ 9 ಮಂದಿ ರಜೆಯ ಹಿನ್ನೆಲೆಯಲ್ಲಿ ಕಾಸರಗೋಡಿಗೆ ಬಂದಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿ ವಾಹನ ನಿಲ್ಲಿಸಿ, ಐವರು ಸಮುದ್ರಕ್ಕೆ ತೆರಳಿದ್ದರು. ಇತರ ಐವರು ವಾಹನದಲ್ಲೇ ಉಳಿದಿದ್ದರು .
ಐವರು ಸಮುದ್ರಕ್ಕೆ ಇಳಿದಿದ್ದ ಸಂದರ್ಭದಲ್ಲಿ ರಫೀಕ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಸ್ಥಳೀಯರು, ಅಗ್ನಿಶಾಮಕ ದಳದವರು ಶೋಧ ನಡೆಸಿದ್ದು, ಸಂಜೆ ವೇಳೆ ಮೃತದೇಹ ಪತ್ತೆಯಾಗಿದೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.