×
Ad

ಮೃತ ಗಣಪತಿ ಕುಟುಂಬಕ್ಕೆ 10 ಕೋಟಿ ರೂ. ಪರಿಹಾರಕ್ಕೆ ಆಗ್ರಹ

Update: 2016-07-09 17:20 IST

ಮಂಗಳೂರು,ಜು.9: ಡಿವೈಎಸ್‌ಪಿ ಎಂ.ಕೆ. ಗಣಪತಿಯವರ ಆತ್ಮಹತ್ಯೆ ತನಿಖೆಯನ್ನು ಸಿಬಿಐಗೆ ನೀಡಬೇಕು ಹಾಗೂ ಅವರ ಕುಟುಂಬಕ್ಕೆ 10 ಕೋಟಿ ರು. ಪರಿಹಾರ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಲ.ಅನಿಲ್ ದಾಸ್ ಆಗ್ರಹಿಸಿದ್ದಾರೆ.

ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿ ಶನಿವಾರ ಜಿಲ್ಲಾಧಿಕಾರಿ ಅವರ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಟನೆಯಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಿಗೆ ಪ್ರಾಮಾಣಿಕತೆಯಿಂದ ಕೆಲಸ ಮಾಡುವ ವಾತಾವರಣ ಇಲ್ಲವಾಗಿದೆ. ಗಣಪತಿಯವರು ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಆತ್ಮಹತ್ಯೆಗೆ ಮೊದಲು ಖಾಸಗಿ ಮಾಧ್ಯಮದಲ್ಲ್ಲಿ ಹೇಳಿಕೆ ನೀಡಿದ್ದಾರೆ. ಅವರು ಹೆಸರಿಸಿರುವ ಹಿರಿಯ ಅಧಿಕಾರಿಗಳನ್ನು ತನಿಖೆ ಮುಗಿಯುವರೆಗೆ ಅಮಾನತಿನಲ್ಲಿ ಇಡಬೇಕು. ಕೆ.ಜೆ.ಜಾರ್ಜ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು. ಹಾಗೂ ತನಿಖೆಯನ್ನು ಸಿಬಿಐಗೆ ಮುಂದುವರಿಸುವಂತೆ ಆದೇಶ ನೀಡಬೇಕೆಂದು ಆಗ್ರಹಿಸಿದರು.

ವೇದಿಕೆಯ ಜಿಲ್ಲಾ ವಕ್ತಾರ ರಹೀಂ ಉಚ್ಚಿಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಹುಸೈನ್ ಬೆಂಗ್ರೆ, ಮಧುಸೂದನ್ ಗೌಡ, ಜಯರಾಜ್ ಜಪ್ಪಿನಮೊಗರು, ಎ.ಕೆ. ಜಮಾಲ್, ಅರುಣ್‌ಕುಮಾರ್, ರಾಜೇಶ್ ತಲಪಾಡಿ ಪ್ರತಿಭಟನೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News