×
Ad

ಜಮಾಅತೆ ಇಸ್ಲಾಮೀ ಹಿಂದ್‌ನಿಂದ ರಮಝಾನ್‌ಕಿಟ್, ಫಿತ್ರ್‌ಝಕಾತ್, ಈದ್‌ಕಿಟ್ ವಿತರಣೆ

Update: 2016-07-09 18:12 IST

ಮಂಗಳೂರು, ಜು. 9: ಜಮಾಅತೆ ಇಸಾಮೀ ಹಿಂದ್ ವತಿಯಿಂದ ದ.ಕ. ಜಿಲ್ಲೆಯ ವಿವಿಧ ತಾಲೂಕುಗಳಿಗೆ ರಮಝಾನ್ ಕಿಟ್, ಫಿತ್ರ್‌ಝಕಾತ್, ಈದ್‌ಕಿಟ್ ವಿತರಣೆ ಮಾಡಲಾಯಿತು.

ದ.ಕ. ಜಿಲ್ಲೆಯ ಮಂಗಳೂರು, ಬೆಂಗರೆ, ಉಳ್ಳಾಲ, ಎಡಪದವು, ವಾಮಂಜೂರು, ಬಂಟ್ವಾಳ, ಬಿ.ಸಿ.ರೋಡ್, ಪಾಣೆಮಂಗಳೂರು, ವಿಟ್ಲ, ಬಂಟ್ವಾಳ, ಉಪ್ಪಿನಂಗಡಿ, ಪುತ್ತೂರು, ಬೆಳ್ತಂಗಡಿ ಶಾಖೆ ಹಾಗೂ ವರ್ತುಲಗಳ ವಿವಿಧ ಪ್ರದೇಶಗಳಲ್ಲಿ ಈ ಬಾರಿ ಒಟ್ಟು 18,58,450 ರೂ. ಮೌಲ್ಯದ ರಮಝಾನ್ ರೇಷನ್ ಅನ್ನು 1,105 ಕುಟುಂಬಗಳಿಗೆ ವಿತರಣೆ ಮಾಡಲಾಯಿತು. 6381 ಕುಟುಂಬಗಳಿಗೆ 9,08,210 ರೂ. ಮೌಲ್ಯದ ಫಿತ್ರ್‌ಝಕಾತ್ ಹಾಗೂ 47, 000 ರೂ. ಮೌಲ್ಯದ ಈದ್‌ಕಿಟ್ 112 ಅರ್ಹ ಬಡಕುಟುಂಬಗಳಿಗೆ ವಿತರಿಸಲಾಯಿತು ಎಂದುಜಮಾಅತೆ ಇಸ್ಲಾಮೀ ಹಿಂದ್‌ದ.ಕ. ಜಿಲ್ಲಾ ಘಟಕವು ಪ್ರಕಟನೆಯಲ್ಲಿ ತಿಳಿಸಿದೆ.

ಈ ಪುಣ್ಯ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ದಾನಿಗಳಿಗೆ ಜಮಾಅತೆ ಇಸ್ಲಾಮೀ ಹಿಂದ್‌ದ.ಕ.ಜಿಲ್ಲಾ ಘಟಕವು ಕೃತಜ್ಞತೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News