×
Ad

ಜವಾಹರ ಬಾಗ್ ಹಿಂಸಾಚಾರ ದುರದೃಷ್ಟಕರ

Update: 2016-07-09 23:40 IST

ಮಥುರಾ, ಜು.9: ಮಥುರಾದ ಜವಾಹರಬಾಗ್‌ನಲ್ಲಿ ನಡೆದ ಹಿಂಸಾಚಾರ ‘ದುರದೃಷ್ಟಕರ’ ಘಟನೆ ಎಂದು ಉಲ್ಲೇಖಿಸಿರುವ ಉತ್ತರ ಪ್ರದೇಶದ ರಾಜ್ಯಪಾಲ ರಾಮ್‌ನಾಯ್ಕ, ಅದು ಭಗವಾನ್ ಕೃಷ್ಣನ ನಾಡಿಗೆ ಕೆಟ್ಟ ಹೆಸರು ತಂದಿದೆ ಎಂದಿದ್ದಾರೆ.

 
  ದೇವಾಲಯ ನಗರವಾಗಿ ಹಾಗೂ ಭಾವನಾತ್ಮಕ ಸಮಗ್ರತೆಗಾಗಿ ಖ್ಯಾತಿ ಪಡೆದಿರುವ ಮಥುರಾ-ವೃಂದಾವನ ಇತ್ತೀಚೆಗೆ ಕೆಟ್ಟ ಹೆಸರನ್ನು ಪಡೆಯಿತು. ಗೋಪಾಲನ ನಾಡಿನಲ್ಲಿ ಭೂ ಅತಿಕ್ರಮಣ ನಡೆದಿರುವುದು ದುರದೃಷ್ಟಕರ, ಅದು ಜನರ ಹತ್ಯೆಗೆ ಕಾರಣವಾದುದು ತೀರಾ ಕೆಟ್ಟದೆಂದು ವೃಂದಾವನದ ದೇವಾಲಯ ನವೀಕರಣದ ಬಳಿಕ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದರು. ಘಟನೆಯ ಕುರಿತು ಕೂಲಂಕಷ ತನಿಖೆ ನಡೆಯುತ್ತಿದ್ದು, ವಿವರವನ್ನು ಆಮೇಲೆ ಬಹಿರಂಗ ಪಡಿಸಲಾಗುವುದೆಂದು ರಾಮ್ ನಾಯ್ಕಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News