×
Ad

ಆಲಡ್ಕ ಮಸೀದಿ ಸಿಬ್ಬಂದಿ ಹನೀಫ್ ಯಾನೆ ಅಬ್ಬು ನಿಧನ

Update: 2016-07-10 10:05 IST

ವಿಟ್ಲ, ಜು.10: ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇಲ್ಲಿನ ಆಲಡ್ಕ-ಪಡ್ಪು ನಿವಾಸಿ ಮುಹಮ್ಮದ್ ಹನೀಫ್ ಯಾನೆ ಅಬ್ಬು (37) ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. 

    ಕಳೆದ ಹಲವು ವರ್ಷಗಳಿಂದ ಮಸೀದಿಯಲ್ಲಿ ಸಿಬ್ಬಂದಿಯಾಗಿ ಧಾರ್ಮಿಕ ಗುರುಗಳ ಸೇವೆಗೈಯುತ್ತಿದ್ದ ಹನೀಫ್ ಯಾನೆ ಅಬ್ಬು ಅವರಿಗೆ ಕಳೆದ ಒಂದು ತಿಂಗಳಿನಿಂದ ಹಠಾತ್ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. 
ಮೃತರು ತಂದೆ, ತಾಯಿ, ಪತ್ನಿ, ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. 

ಸಂತಾಪ : 
ಮಸೀದಿ ಸಿಬ್ಬಂದಿಯಾಗಿ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಹನೀಫ್ ಯಾನೆ ಅಬ್ಬು ಅವರ ಅಕಾಲಿಕ ನಿಧನಕ್ಕೆ ಮಸೀದಿ ಮುದರ್ರಿಸ್ ಹಾಜಿ ಬಿ.ಎಚ್. ಅಬೂಸ್ವಾಲಿಹ್ ಮುಸ್ಲಿಯಾರ್, ಅಧ್ಯಕ್ಷ ಬಿ. ಅಬೂಬಕರ್ ತ್ರೀಮೆನ್ಸ್, ಪ್ರಧಾನ ಕಾರ್ಯದರ್ಶಿ ಉಮರ್ ಹಾಜಿ ಹಾಗೂ ಮಸೀದಿ ಅಡಳಿತ ಸಮಿತಿ ಸದಸ್ಯರು, ಮದ್ರಸ ಮುಖ್ಯೋಪಾಧ್ಯಾಯ ಎಸ್.ಎಂ. ಅಬ್ದುಲ್ ಖಾದರ್ ಮದನಿ ಸಹಿತ ಮದ್ರಸ ಅಧ್ಯಾಪಕರು ತೀವ್ರ ಸಂತಾಪ  ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News