ಕಾಸರಗೋಡು: ಒಂದೂವರೆ ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನ ವಶ, ಓರ್ವನ ಬಂಧನ
Update: 2016-07-10 14:52 IST
ಕಾಸರಗೋಡು, ಜು.10: ತಂಬಾಕು ಉತ್ಪನ್ನಗಳನ್ನು ಮಾರಾಟಕ್ಕೆ ಕೊಂಡ್ಯೊಯ್ಯುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಇಂದು ನಡೆದಿದೆ.
ಉತ್ತರಪ್ರದೇಶದ ಕಮಲ್(19) ಎಂಬಾತನೆ ತಂಬಾಕು ಉತ್ಪನ್ನಗಳನ್ನು ಮೂರು ಗೋಣಿ ಚೀಲಗಳಲ್ಲಿ ತುಂಬಿಸಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದನೆನ್ನಲಾಗಿದೆ. ಕಾಸರಗೋಡು ನಗರಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದೂವರೆ ಲಕ್ಷ ರೂ. ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಪಡಿಸಿ, ಆತನನ್ನು ಬಂಧಿಸಿದ್ದಾರೆ.