×
Ad

ಕಾಸರಗೋಡು : ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

Update: 2016-07-10 20:05 IST

ಕಾಸರಗೋಡು,ಜು.10 :  ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಯೋರ್ವ ಮೃತಪಟ್ಟ ಘಟನೆ   ಕುಂಬಳೆಯಲ್ಲಿ    ಆದಿತ್ಯವಾರ ಸಂಜೆ ನಡೆದಿದೆ.

ಕುಂಬಳೆ ಕೊಯಿಪ್ಪಾಡಿ ಯ  ಮಿಥುನ್ ( 18 )  ಮೃತಪಟ್ಟ ವಿದ್ಯಾರ್ಥಿ .  ಸಹಪಾಠಿಗಳ ಜೊತೆ ತೆರಳಿದ್ದಾಗ ಘಟನೆ  ನಡೆದಿದೆ.

ಕುಂಬಳೆಯ ಖಾಸಗಿ ಕಾಲೇಜಿನ ಪದವಿ ವಿದ್ಯಾರ್ಥಿಯಾಗಿದ್ದನು. ರಜೆಯಾದುದರಿಂದ  ಸಹಪಾಠಿಗಳ ಜೊತೆ  ಕೆರೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ  ಈ ಘಟನೆ ನಡೆದಿದೆ. 

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು  ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದರು.  . ಕುಂಬಳೆ ಪೊಲೀಸರಿಂದ ಕೇಸು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News