ಬೆಳ್ತಂಗಡಿ: ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ
ಬೆಳ್ತಂಗಡಿ,ಜು.10: ವೇಣೂರು ಗ್ರಾ.ಪಂ.ನ ನಿರ್ವಹಣೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದ ದಿನಕೂಲಿ ಕಾರ್ಮಿಕ ಕುಟುಂಬದ ಮಕ್ಕಳಿಗೆ ಶ್ರೀ ಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಪೌಂಡೇಶನ್ ವತಿಯಿಂದ ನೀಡಲಾದ ಶಾಲಾ ಪರಿಕರಗಳನ್ನು ಗ್ರಾ.ಪಂ. ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿ ಹಸ್ತಾಂತರಿಸಿದರು.
ತ್ಯಾಜ್ಯ ವಿಲೇವಾರಿ ಘಟಕದ ಅಸ್ಸಾಂ ಮೂಲದ ದಿನಕೂಲಿ ಕಾರ್ಮಿಕ ದಂಪತಿಯ ಇಬ್ಬರು ಮಕ್ಕಳಿಗೆ ಬಟ್ಟೆ ಬರೆ, ಬ್ಯಾಗು ಹಾಗೂ ಮತ್ತಿತರ ಶಾಲಾ ಪರಿಕರಗಳ ಅಗತ್ಯತೆಯನ್ನು ಗಮನಿಸಿ ಸೇವಾ ಸಂಸ್ಥೆಯ ಗೌರವ ಸಲಹೆಗಾರ ಮೂಡಬಿದಿರೆಯ ಉದ್ಯಮಿ ವಿಠಲ ಶೆಟ್ಟಿ ಪೂರೈಸಿದ್ದರು.
ಶ್ರೀಗುರು ಮಹಿಳಾ ಮತ್ತು ಮಕ್ಕಳ ಹಕ್ಕು ಪೌಂಡೇಶನ್‌ನ ಅಧ್ಯಕ್ಷೆ ಶ್ರೀವಿದ್ಯಾ, ವೇಣೂರು ತಾ.ಪಂ. ಸದಸ್ಯ ಕೆ. ವಿಜಯ ಗೌಡ, ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಸದಸ್ಯರುಗಳಾದ ರಾಜೇಶ್ ಪೂಜಾರಿ ಮೂಡುಕೋಡಿ, ನೇಮಯ್ಯ ಕುಲಾಲ್, ಮಾಜಿ ಅಧ್ಯಕ್ಷ ಸತೀಶ್ ಹೆಗ್ಡೆ, ಕಾರ್ಯದಶಿ ಲಕ್ಷ್ಮೀನಾರಾಯಣ ಹಾಗೂ ಸಿಬ್ಬಂದಿ ಮತ್ತು ಉಪಸ್ಥಿತರಿದ್ದರು.
ಪಂ. ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣರಾಜ ಕಾರ್ಯಕ್ರಮ ನಿರ್ವಹಿಸಿದರು.