ಸುಳ್ಯ: ಯುವತಿಯ ಕತ್ತಿನಿಂದ ಚಿನ್ನದ ಸರ ಎರಗಿಸಿದ ಆರೋಪಿ ಬಂಧನ

Update: 2016-07-10 15:15 GMT

ಸುಳ್ಯ,ಜು.10: ದೇವಸ್ಥಾನಕ್ಕೆ ಹೋಗುತ್ತಿದ್ದ ಯುವತಿಯೊಬ್ಬಳ ಕತ್ತನಿಂದ ಚಿನ್ನದ ಸರವನ್ನು ಎರಗಿಸಿ ಪರಾರಿಯಾಗಿದ್ದು, ಸುಳ್ಯ ಪೋಲಿಸರು ಆರೋಪಿಯನ್ನು ಪತ್ತೆ ಹಚ್ಚಿ, ಆರೋಪಿಯನ್ನು ಭಾನುವಾರ ಬಂಧಿಸಿದ್ದಾರೆ.

ಕಲ್ಲುಮುಟ್ಲು ಕರುಣಾಕರ ಎಂಬವರ ಪುತ್ರಿ ಆಶಾ ಶೆಟ್ಟಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಸುಳ್ಯ ಅಂಬಟೆಡ್ಕದಲ್ಲಿರುವ ಶ್ರೀವೆಂಕಟ್ರಮಣ ದೇವ ಮಂದಿರಕ್ಕೆ ತೆರಳುತ್ತಿದ್ದಾಗ ನೀಲಿ ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ವ್ಯಕ್ತಿ ಆಶಾ ಶೆಟ್ಟಿಯವರು ದೇವಸ್ಥಾನದ ಮೆಟ್ಟಿಲು ಇಳಿಯುತ್ತಿದ್ದ ವೇಳೆ ಅವರ ಕತ್ತಿಗೆ ಕೈಹಾಕಿ 24 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ ತೂಕದ ಚಿನ್ನದ ಸರವನ್ನು ಎರಗಿಸಿ ಪರಾರಿಯಾಗಿದ್ದನು. ಘಟನೆ ಕುರಿತು ಸುಳ್ಯ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿ ಪತ್ತೆಗೆ ಐದುದಿನಗಳಿಂದ ಪೊಲೀಸರು ತೀವ್ರ ಶೋಧ ಆರಂಭಿಸಿದ್ದರು. ಆದರೆ ನಗರದ ಸಿಸಿಕ್ಯಾಮರಾಗಳನ್ನು ಆಧರಿಸಿ ಆರೋಪಿಯ ಪತ್ತೆಗೆ ಬಲೆಬೀಸಿ ಭಾನುವಾರ ಆರೋಪಿ ಮಡಪ್ಪಾಡಿಯ ದಿಲೀಪ್‌ನನ್ನು ಪೋಲಿಸರು ಬಂಧಿಸಿದರು. ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿದಾಗ ಸುಳ್ಯದ ಚಿನ್ನ ಅಂಗಡಿಗೆ ಮಾರಾಟಮಾಡಿರುವುದಾಗಿ ಬಾಯಿಬಿಟ್ಟಿದ್ದು, ಚಿನ್ನದ ಸರವನ್ನು ಅಂಗಡಿಯಿಂದ ಪೋಲಿಸರು ವಶಪಡಿಸಿಕೊಂಡಿದ್ದಾರೆ. ಸುಳ್ಯದ ವೃತ್ತ ನಿರೀಕ್ಷಕ ಕೃಷ್ಣಯ್ಯ, ಎಸ್.ಐ.ಚಂದ್ರಶೇಖರ ನೇತೃತ್ವದ ಪೋಲಿಸರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News