ತೊಕ್ಕೊಟ್ಟು: ರೈಲಿನಡಿಗೆ ಬಿದ್ದು ಆತ್ಮಹತ್ಯೆ
Update: 2016-07-10 21:13 IST
ಉಳ್ಳಾಲ: ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ವ್ಯಕ್ತಿಯೊರ್ವರು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆಗೈದ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ.
ಆತ್ಮಹತ್ಯೆಗೈದ ವ್ಯಕ್ತಿಯನ್ನು ಕೊಣಾಜೆ ಗ್ರಾಮದ ಪಟ್ಟೋರಿ ನಿವಾಸಿ ನಾರಾಯಣ(42) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಅವರು ಕಳೆದ ಹಲವಾರು ವರ್ಷದಿಂದ ಇದೇ ವೃತ್ತಿಯಲ್ಲಿದ್ದುಕೊಂಡು ಜೀವನ ನಡೆಸುತ್ತಿದ್ದರು. ಪತ್ನಿ ಹಾಗೂ ಎರಡು ಮಕ್ಕಳನ್ನು ಹೊಂದಿರುವ ಇವರು ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿನಡಿಗೆ ತಲೆಯಿಟ್ಟು ಆತ್ಮಹತ್ಯೆಗೈದಿದ್ದಾರೆ.