ನಗರೋತ್ಥಾನ ಯೋಜನೆಯಲ್ಲಿ ಅನುದಾನ ಬಳಕೆಯಲ್ಲಿ ಹಿನ್ನಡೆ
ಮಂಗಳೂರು, ಜು.10:ನಗರೋತ್ಥಾನ ಹಂತ-2ರ ಯೋಜನೆಯ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇಕಡಾ 40 ರಷ್ಟು ವೆಚ್ಚವಾಗಿದ್ದು ಉಳಿದ ಹಣ ವೆಚ್ಚವಾಗದೆ ಅನುದಾನ ಬಳಕೆಯಲ್ಲಿ ಹಿಂದುಳಿದಿರುವ ಬಗ್ಗೆ ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳಲು ಮುಖ್ಯ ಮಂತ್ರಿ ವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಜುಲೈ 2ರಂದು ಸೂಚನೆ ನೀಡಲಾಗಿದೆ.ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿಂದ ಮನಪಾ ಕಚೇರಿಗೆ ಜುಲೈ 6 ರಂದು ತಕ್ಷಣ ಕ್ರಮ ಕೈ ಗೊಳ್ಳಲು ತುರ್ತ ಸೂಚನೆ ನೀಡಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾಗಿರುವ ಶೇ 100 ಕೋಟಿ ಅನುದಾನ ಈಗಾಗಲೆ ಬಳಕೆಯಾಗಬೇಕಾಗಿತ್ತು. ವಸತಿ ಯೋಜನೆ,ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯಲ್ಲಿ ಯಡಿಯಲ್ಲೂ ಮಂಗಳೂರು ಮಹಾನಗರ ಪಾಲಿಕೆಯ ಪ್ರಗತಿ ಕುಂಠಿತಗೊಂಡಿದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.ನಗರೋತ್ಥಾನ ಹಂತ-2ರಲ್ಲಿ ಬಿಡುಗಡೆಯಾದ ಅನುದಾನವನ್ನು ಮುಂದಿನ ಮೂರು ತಿಂಗಳ ಒಳಗಾಗಿ ಖರ್ಚುಮಾಡಿ ಸಮರೋಪಾಧಿಯಲ್ಲಿ ಕಾಮಗಾರಿ ಕೆಲಸ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.ನಗರೋತ್ಥಾನ ಹಂತ-3ರ ಕಾಮಗಾರಿಗಳನ್ನು 2017ರ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಲು ಮುಂದಿನ ಒಂದು ತಿಂಗಳೊಳಗೆ ಟೆಂಡರ್ ಪ್ರಕ್ರೀಯೆ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಸೂಕ್ತ ಕ್ರಮಕ್ಕಾಗಿ ಸೂಚನೆ ನೀಡಿದ್ದಾರೆ.ನಗರೋತ್ಥಾನ 2ನೆ ಹಂತದ ಉಳಿಕೆ ಅನುದಾನಕ್ಕೆ ಸಂಬಂಧಿಸಿದಂತೆ ತಕ್ಷಣ ಟೆಂಡರ್ ಕರೆದು ಕಾಮಗಾರಿ ಕೈ ಗೆತ್ತಿಕೊಳ್ಳಲು ಸೂಚನೆ ನೀಡಿದ್ದಾರೆ.13ನೆ ಹಣಕಾಸು ಯೋಜನೆಯಡಿ ಎಲ್ಲಾ ಕಾಮಗಾರಿಗಳನ್ನು ನಗರ ಸ್ಥಳೀಯ ಸಂಸ್ಥೆಗಳು ಆಗಸ್ಟ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಿ ಉಳಿಕೆ ಹಣವನ್ನು ವಾಪಾಸು ಕಳುಹಿಸಬೇಕು ಜುಲೈ 6ರಂದು ಜಿಲ್ಲಾಧಿಕಾರಿ ಕಚೇರಿಯ ಮೂಲಕ ನಗರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಲಿಖಿತವಾಗಿ ತುರ್ತ ಸೂಚನೆ ನೀಡಲಾಗಿದೆ.