ವಿದ್ಯಾರ್ಥಿನಿಗೆ ಚುಡಾಯಿಸಿದವರ ವಿರುದ್ಧ ದೂರು
Update: 2016-07-10 23:32 IST
ಮಂಜೇಶ್ವರ, ಜು.10: ಬದಿಯಡ್ಕದ ಶಾಲೆಯೊಂದರ ವಿದ್ಯಾರ್ಥಿನಿಗೆ ಚುಡಾಯಿಸಿದ ಆರೋಪದಲ್ಲಿ ಕುಂಬ್ಡಾಜೆ ನಿವಾಸಿ ಸಿರಾಜುದ್ದೀನ್ ಸಹಿತ ಮೂವರ ವಿರುದ್ಧ ಬದಿಯಡ್ಕ ಪೊಲೀಸರು ದೂರು ದಾಖಲಿಸಿದ್ದಾರೆ. ಕಾರಿನಲ್ಲಿ ಬಂದು ಬೆಳಿಂಜದಲ್ಲಿ ಕಾದು ನಿಲ್ಲುವ ತಂಡ ವಿದ್ಯಾರ್ಥಿನಿಗೆ ದಿನಾ ಬೆಳಗ್ಗೆ ಮತ್ತು ಸಂಜೆ ಚುಡಾಯಿಸುತ್ತಿದ್ದುದಾಗಿ ದೂರಲಾಗಿದೆ.