×
Ad

ಬಿ.ಸಿ.ರೋಡ್: ಬೃಹತ್ ಮರ ಉರುಳಿ ವಾಹನಗಳಿಗೆ ಹಾನಿ

Update: 2016-07-11 19:59 IST

ಬಂಟ್ವಾಳ, ಜು. 11: ಬಿ.ಸಿ.ರೋಡಿನ ರಕ್ತೇಶ್ವರಿ ದೇವಸ್ಥಾನ ಎದುರಿನಲ್ಲಿದ್ದ ಮರವೊಂದು ಬುಡಸಮೇತ ಧರಾಶಾಹಿಯಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಪರಿಣಾಮ ಈ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಟೆಂಪೊ ಹಾಗೂ ಟವೇರಾ ವಾಹನಗಳು ಜಖಂಗೊಂಡಿವೆ. ಅದೃಷ್ಟವಶಾತ್ ಈ ವಾಹನದಲ್ಲಿ ಮತ್ತು ಸ್ಥಳದಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಮರವನ್ನು ತೆರವುಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News