×
Ad

ತೆಂಕನಿಡಿಯೂರು ಕಾಲೇಜಿನಲ್ಲಿ ವನಮಹೋತ್ಸವ,

Update: 2016-07-11 23:56 IST


ಉಡುಪಿ, ಜು.11: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಹಾಗೂ ಜೆಸೀಐ ಉಡುಪಿ ಸಿಲ್ವರ್‌ಸ್ಟಾರ್ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ವನಮಹೋತ್ಸವ ಕಾರ್ಯಕ್ರಮ ತೆಂಕನಿಡಿಯೂರು ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
 ಜೆಸೀಐ ಉಡುಪಿ ಸಿಲ್ವರ್ ಸ್ಟಾರ್‌ನ ಅಧ್ಯಕ್ಷೆ ಜ್ಯೋತಿ ರಾಮನಾಥ ಶೆಟ್ಟಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿ ನೇಟಿವ್ ಆರ್ಗನೈಶನ್‌ನ ಕಾರ್ಯಕ್ರಮ ನಿರ್ದೇಶಕ ಪ್ರೇಮಾನಂದ ಕಲ್ಮಾಡಿ ಭಾಗವಹಿಸಿದ್ದರು. ಜೇಸಿಐ ಉಡುಪಿ ವಲಯ ಉಪಾಧ್ಯಕ್ಷ ರಾಕೇಶ್ ಕುಂಜೂರು ಮಾತನಾಡಿದರು. ಉಡುಪಿ ಜೇಸಿಐ ಕಾರ್ಯದರ್ಶಿ ಮಲ್ಲಿಕಾ ಕೆ. ಹಾಗೂ ವಿನುತಾ ಕಿರಣ್ ಅತಿಥಿಗಳಾಗಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಬಸವರಾಜ ಯು., ಡಾ.ಮಹೇಶ್‌ಕುಮಾರ್ ಕೆ.ಇ., ರೆಡ್‌ಕ್ರಾಸ್ ಘಟಕದ ಸಂಯೋಜನಾಧಿಕಾರಿ ರವಿರಾಜ ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕವಿತಾ ಸ್ವಾಗತಿಸಿದರು. ಪ್ರಕಾಶ್ ಕೆ. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News