×
Ad

ಪುತ್ತೂರು: ಜಯಕರ್ನಾಟಕದಿಂದ ಅಂಗನವಾಡಿ ಮಕ್ಕಳಿಗೆ ಕೊಡೆ ವಿತರಣೆ

Update: 2016-07-12 21:31 IST

ಪುತ್ತೂರು, ಜು.12: ಜಯಕರ್ನಾಟಕ ಸಂಘಟನೆಯ ಘಟಕದ ವತಿಯಿಂದ ಅಂಗನವಾಡಿ ಮಕ್ಕಳಿಗೆ ಉಚಿತ ಕೊಡೆ ವಿತರಣಾ ಕಾರ್ಯಕ್ರಮವು ಸೋಮವಾರ ಪಜಿಮಣ್ಣು ಅಂಗನವಾಡಿಯಲ್ಲಿ ನಡೆಯಿತು.

ಜಯಕರ್ನಾಟಕ ಸಂಘಟನೆಯ ಪುತ್ತೂರು ತಾಲೂಕು ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಈ ಸಂದರ್ಭದಲ್ಲಿ ಮಾತನಾಡಿ ಬಡವರ, ಅಶಕ್ತರ ಕಣ್ಣೀರೊರೆಸುವುದೇ ಜಯಕರ್ನಾಟಕ ಸಂಘಟನೆಯ ಉದ್ದೇಶವಾಗಿದೆ, ಜಾತಿ, ಧರ್ಮ, ಬಡವ, ಶ್ರೀಮಂತ, ಪಕ್ಷ ಎಂಬ ಅಂತರವಿಲ್ಲದೆ ಎಲ್ಲಿ ಕಷ್ಟದಲ್ಲಿರುವವರು ಇದ್ದಾರೋ ಅವರ ಜೊತೆ ನಮ್ಮ ಸಂಘಟನೆ ಸದಾ ಇರುತ್ತದೆ. ಯಾರು ಸಮಾಜದ ಪರವಾಗಿ ಕೆಲಸ ಮಾಡಲು ಬಯಸುತ್ತಾರೋ ಅವರೆಲ್ಲರಿಗೂ ನಮ್ಮ ಸಂಘಟನೆ ಪ್ರಥಮ ಪ್ರಾಶಸ್ತ್ಯ ನೀಡುತ್ತದೆ. ಮುಂದಿನ ಜನಾಂಗಕ್ಕೂ ಮಾದರೀ ಸಂಘಟನೆಯಾಗಿ ನಮ್ಮ ಸಂಟನೆ ಬೆಳೆದು ಬರುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಂಡೂರು ವ್ಯಾಪ್ತಿಯ 5 ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಕೊಡೆ ವಿತರಣೆ ಮಾಡಲಾಯಿತು.

ಜಯಕರ್ನಾಟಕ ತಾಲೂಕು ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕಾರ್ಯಾಧ್ಯಕ್ಷ ಪ್ರಸನ್ನ ಕುಮಾರ್, ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಆಳ್ವ, ರಫೀಕ್ ಮೊಟ್ಟೆತಡ್ಕ, ಜಯಕರ್ನಾಟಕ ಮುಂಡೂರು ಘಟಕದ ಗೌರವಾಧ್ಯಕ್ಷ ಇಬ್ರಾಹೀಂ ಮುಲಾರ್, ಅಧ್ಯಕ್ಷ ಸಂಜೀವ ಪೂಜಾರಿ ಕುರೆಮಜಲು, ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ, ಕೋಶಾಧಿಕಾರಿ ಮುಂಡೂರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಪದ್ಮಯ್ಯ ನಾಯ್ಕ, ತಿಮ್ಮಪ್ಪ ನಾಯ್ಕ ಬಂಡಿಕಾನ, ಹರೀಶ್ ಸಂಟ್ಯಾರ್, ಆನಂದ್ ಬಂಗೇರ, ಜಗದೀಶ್ ಬದಿಯಡ್ಕ, ಪ್ರವೀಣ್ ಹಾಗೂ ಅಂಗನವಾಡಿ ಕಾರ್ಯಕರ್ತೆ ಬಾರತಿ ಉಪಸ್ಥಿತರಿದ್ದರು. ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News