×
Ad

ತೈವಾನ್: ಎಟಿಎಂಗಳಿಂದ 20 ಲಕ್ಷ ಡಾಲರ್ ದರೋಡೆ

Update: 2016-07-12 21:37 IST

ತೈಪೆ, ಜು. 12: ತೈವಾನ್‌ನ ಎಟಿಎಂ ಯಂತ್ರಗಳಲ್ಲಿ ವಂಚಕ ಸಾಫ್ಟ್‌ವೇರ್ ಅಳವಡಿಸಿದ ಬಳಿಕ ಕಳ್ಳರು ಒಟ್ಟು 20 ಲಕ್ಷ ಡಾಲರ್‌ಗೂ ಅಧಿಕ ನಗದನ್ನು ದೋಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳ್ಳರಿಗಾಗಿ ಪೊಲೀಸರು ಮಂಗಳವಾರ ಶೋಧ ಆರಂಭಿಸಿದ್ದಾರೆ.
ತೈಪೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಫಸ್ಟ್ ಕಮರ್ಶಿಯಲ್ ಬ್ಯಾಂಕ್‌ನ 30ಕ್ಕೂ ಅಧಿಕ ಎಟಿಎಂಗಳಿಗೆ ಮುಸುಕುಧಾರಿ ಕಳ್ಳರು ಲಗ್ಗೆಯಿಟ್ಟಿದ್ದು, ‘‘ನಗದು ತುಂಬಿದ ಚೀಲಗಳೊಂದಿಗೆ’’ ಜಾಗ ಖಾಲಿ ಮಾಡಿದ್ದಾರೆ ಎಂದು ಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಎಟಿಎಂ ಯಂತ್ರಗಳಲ್ಲಿ ವಂಚಕ ಸಾಫ್ಟ್‌ವೇರ್‌ಗಳನ್ನು ಅಳವಡಿಸಿರುವ ಸಾಧ್ಯತೆಯಿದೆ ಎಂಬ ಸಂಶಯವನ್ನು ಅದು ವ್ಯಕ್ತಪಡಿಸಿದೆ. ಯಂತ್ರಗಳಲ್ಲಿ ನೇರವಾಗಿ ವ್ಯವಹಾರ ನಡೆಸದೆಯೇ ಹಣವನ್ನು ಕದಿಯುವಲ್ಲಿ ಕಳ್ಳರು ಯಶಸ್ವಿಯಾಗಿದ್ದಾರೆ ಎಂದು ಅದು ತಿಳಿಸಿದೆ. ದರೋಡೆಯಲ್ಲಿ ಕನಿಷ್ಠ ಇಬ್ಬರು ಶಾಮೀಲಾಗಿದ್ದಾರೆ- ಓರ್ವ ರಶ್ಯನ್ ಪ್ರಜೆ ಹಾಗೂ ಇನ್ನೋರ್ವನೂ ವಿದೇಶೀಯನಾಗಿದ್ದು ಆತನ ರಾಷ್ಟ್ರೀಯತೆ ತಿಳಿದಿಲ್ಲ ಎಂದು ತೈಪೆ ಪೊಲೀಸರು ತಿಳಿಸಿದರು.
ವಾರಾಂತ್ಯದಲ್ಲಿ 34 ಎಟಿಎಂಗಳಿಂದ ಹಣವನ್ನು ಕದಿಯಲಾಗಿದೆ. ಪ್ರತಿಯೊಂದು ಎಟಿಎಂನಿಂದ ಹಣ ಕದಿಯಲು ಈ ಕಳ್ಳರು 5ರಿಂದ 10 ನಿಮಿಷಗಳನ್ನು ತೆಗೆದುಕೊಂಡರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News