ಬೈಕ್‌ಗೆ ಲಾರಿ ಢಿಕ್ಕಿ: ಸಹಸವಾರ ಮೃತ್ಯು
Update: 2016-07-12 23:34 IST
ಮಣಿಪಾಲ, ಜು.12: ಮಣಿಪಾಲ ಐಯನೆಕ್ಸ್ ಥಿಯೇಟರ್ ಸಮೀಪದ ಉನ್ನತಿ ರೆಸಿಡೆನ್ಸಿ ಕಟ್ಟಡದ ಎದುರು ಸೋಮವಾರ ಸಂಜೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಸಹಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸುಧಾಕರ ಪೂಜಾರಿ ಎಂದು ಗುರುತಿಸಲಾಗಿದೆ. ಬೈಕ್ ಸವಾರ 80 ಬಡಗುಬೆಟ್ಟುವಿನ ದಿವಾಕರ ಪೂಜಾರಿ ಎಂಬವರು ಗಾಯಗೊಂಡಿದ್ದಾರೆ. ಇವರಿಬ್ಬರು ಅಂಬಲಪಾಡಿಯಿಂದ ಮಣಿಪಾಲ ಕಡೆಗೆ ಬೈಕ್‌ನಲ್ಲಿ ಬರುತ್ತಿರುವಾಗ ಹಿಂದಿನಿಂದ ಬಂದ ಸರಕು ಸಾಗಣಿಕೆಯ ಲಾರಿಯು ಬೈಕಿನ ಹ್ಯಾಂಡಲ್‌ಗೆ ತಾಗಿತೆನ್ನಲಾಗಿದೆ. ಇದರ ಪರಿಣಾಮ ದಿವಾಕರ ಪೂಜಾರಿ ಚರಂಡಿಗೆ ಬಿದ್ದರೆ, ಸುಧಾಕರ ಪೂಜಾರಿ ರಸ್ತೆಗೆ ಬಿದ್ದರು. ಈ ವೇಳೆ ಲಾರಿಯ ಹಿಂದಿನ ಚಕ್ರ ಸುಧಾಕರ ಪೂಜಾರಿಯ ಮೇಲೆ ಹಾದು ಹೋಯಿತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.