×
Ad

ತೆರವಿಗೆ ಆಗ್ರಹಿಸಿ ಜು.18ರಂದು ಧರಣಿ

Update: 2016-07-12 23:44 IST

ಪುತ್ತೂರು, ಜು.12: ತಾಲೂಕಿನ ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ಕಾಲನಿಗೆ ಹೋಗುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜು.18ರಂದು ಅರಿಯಡ್ಕ ಗ್ರಾಪಂ ಮುಂದೆ ದಲಿತ್ ಸೇವಾ ಸಮಿತಿ ವತಿಯಿಂದ ಧರಣಿ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ಅಧ್ಯಕ್ಷ ಗಿರಿಧರ್ ನಾಯ್ಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಮ್ಚಿನಡ್ಕ ಕಾಲನಿಯಲ್ಲಿ 9 ದಲಿತ ಕುಟುಂಬಗಳ ಮನೆಗಳಿದೆ. ಈ ಮನೆಗಳಿಗೆ ಸಂಪರ್ಕಿಸುವ ಸರಕಾರಿ ಜಾಗದ ರಸ್ತೆಯನ್ನು ಸ್ಥಳೀಯ ಪಂಚಾಯತ್ ಸದಸ್ಯೆಯ ಕುಮ್ಮಕ್ಕಿನಿಂದ ಕೇಪು ಎಂಬವರು ಮುಚ್ಚಿದ್ದಾರೆ. ಇದರಿಂದ 9 ಮನೆಗಳಿಗೆ ತೆರಳಲು ದಾರಿಯಿಲ್ಲದೆ ಕಾಲು ದಾರಿಯನ್ನು ಬಳಸುವಂತಾಗಿದೆ. ಫೆ.25ರಂದು ರಸ್ತೆಯನ್ನು ಬೇಲಿ ಹಾಕಿ ಬಂದ್ ಮಾಡಲಾಗಿದೆ. ಸಂಘಟನೆಯ ವತಿಯಿಂದ ಮಾರ್ಚ್ ತಿಂಗಳಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ರಸ್ತೆ ತೆರವುಗೊಳಿಸುವಂತೆ ಮನವಿ ಮಾಡಲಾಗಿತ್ತು. ಅರಿಯಡ್ಕ ಗ್ರಾಮಸಭೆಯಲ್ಲೂ ಧ್ವನಿ ಎತ್ತಲಾಗಿತ್ತು. ಈ ಸಂದರ್ಭ ವಾರದೊಳಗೆ ತೆರವುಗೊಳಿಸುವುದಾಗಿ ಪಿಡಿಒ ವೌಖಿಕ ಭರವಸೆ ನೀಡಿದ್ದರು. ಆದರೆ ಗ್ರಾಮಸಭೆ ನಡೆದು 2 ತಿಂಗಳು ಕಳೆದರೂ ಈ ತನಕ ತೆರವುಗೊಳಿಸಲಾಗಿಲ್ಲ. ಹಾಗಾಗಿ ಬೇಲಿಯನ್ನು ತೆರವುಗೊಳಿಸುವ ತನಕ ಧರಣಿ ಮುಂದುವರಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಸದಸ್ಯರಾದ ದೇವಪ್ಪ, ಉಮೇಶ್, ಸುರೇಶ್ ಮತ್ತು ಪ್ರವೀಣ್ ಉಪಸ್ಥಿತರಿದ್ದರು.ಪುತ್ತೂರು, ಜು.12: ತಾಲೂಕಿನ ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿ ಕಾಲನಿಗೆ ಹೋಗುವ ರಸ್ತೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಜು.18ರಂದು ಅರಿಯಡ್ಕ ಗ್ರಾಪಂ ಮುಂದೆ ದಲಿತ್ ಸೇವಾ ಸಮಿತಿ ವತಿಯಿಂದ ಧರಣಿ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ಅಧ್ಯಕ್ಷ ಗಿರಿಧರ್ ನಾಯ್ಕಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅಮ್ಚಿನಡ್ಕ ಕಾಲನಿಯಲ್ಲಿ 9 ದಲಿತ ಕುಟುಂಬಗಳ ಮನೆಗಳಿದೆ. ಈ ಮನೆಗಳಿಗೆ ಸಂಪರ್ಕಿಸುವ ಸರಕಾರಿ ಜಾಗದ ರಸ್ತೆಯನ್ನು ಸ್ಥಳೀಯ ಪಂಚಾಯತ್ ಸದಸ್ಯೆಯ ಕುಮ್ಮಕ್ಕಿನಿಂದ ಕೇಪು ಎಂಬವರು ಮುಚ್ಚಿದ್ದಾರೆ. ಇದರಿಂದ 9 ಮನೆಗಳಿಗೆ ತೆರಳಲು ದಾರಿಯಿಲ್ಲದೆ ಕಾಲು ದಾರಿಯನ್ನು ಬಳಸುವಂತಾಗಿದೆ. ಫೆ.25ರಂದು ರಸ್ತೆಯನ್ನು ಬೇಲಿ ಹಾಕಿ ಬಂದ್ ಮಾಡಲಾಗಿದೆ. ಸಂಘಟನೆಯ ವತಿಯಿಂದ ಮಾರ್ಚ್ ತಿಂಗಳಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ಗೆ ರಸ್ತೆ ತೆರವುಗೊಳಿಸುವಂತೆ ಮನವಿ ಮಾಡಲಾಗಿತ್ತು. ಅರಿಯಡ್ಕ ಗ್ರಾಮಸಭೆಯಲ್ಲೂ ಧ್ವನಿ ಎತ್ತಲಾಗಿತ್ತು. ಈ ಸಂದರ್ಭ ವಾರದೊಳಗೆ ತೆರವುಗೊಳಿಸುವುದಾಗಿ ಪಿಡಿಒ ವೌಖಿಕ ಭರವಸೆ ನೀಡಿದ್ದರು. ಆದರೆ ಗ್ರಾಮಸಭೆ ನಡೆದು 2 ತಿಂಗಳು ಕಳೆದರೂ ಈ ತನಕ ತೆರವುಗೊಳಿಸಲಾಗಿಲ್ಲ. ಹಾಗಾಗಿ ಬೇಲಿಯನ್ನು ತೆರವುಗೊಳಿಸುವ ತನಕ ಧರಣಿ ಮುಂದುವರಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಸದಸ್ಯರಾದ ದೇವಪ್ಪ, ಉಮೇಶ್, ಸುರೇಶ್ ಮತ್ತು ಪ್ರವೀಣ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News