×
Ad

ಬೆಂಕಿ ಅವಘಡ: ಅಪಾರ ನಷ್ಟ

Update: 2016-07-12 23:45 IST

ಪಡುಬಿದ್ರೆ, ಜು.12: ಕಳೆದ ರಾತ್ರಿ ಮನೆಯೊಂದರಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ವಿದ್ಯುತ್ ಉಪಕರಣಗಳು ಸಹಿತ ಮೀನುಗಾರಿಕಾ ಸಲಕರಣೆಗಳು ಅಗ್ನಿಗೆ ಆಹುತಿಯಾಗಿವೆ. ಹೆಜಮಾಡಿ ಉಲ್ಲಾಸ ನಗರ ನಿವಾಸಿ ಹೇಮಾವತಿ ಎಂಬವರ ಸಮುದ್ರ ತೀರದ ಮನೆಯಲ್ಲಿ ಡಿಜೆ ಸೌಂಡ್ಸ್‌ಗೆ ಸಂಬಂಧಿಸಿದ ವಿದ್ಯುತ್ ಉಪಕರಣಗಳು ಹಾಗೂ ಮೀನುಗಾರಿಕೆಗೆ ಸಂಬಂಧಿತ ಸಲಕರಣೆಗಳನ್ನು ಇಡಲಾಗಿತ್ತು. ಈ ಮನೆಯಲ್ಲಿ ರಾತ್ರಿ ಯಾರೂ ಇಲ್ಲದಿದ್ದುದರಿಂದ ಬೆಂಕಿ ಹತ್ತಿದ ವಿಚಾರ ತಕ್ಷಣಕ್ಕೆ ತಿಳಿಯಲಿಲ್ಲ. ಪಕ್ಕದ ಮನೆಯವರಿಗೆ ತಡವಾಗಿ ವಿಚಾರ ತಿಳಿದಿದ್ದು, ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರು. ಬಳಿಕ ಸ್ಥಳೀಯ ಅಗ್ನಿಶಾಮಕದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಿಂದ ಸುಮಾರು ರೂ. 6 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News