×
Ad

ರಿಯೋ ಒಲಿಂಪಿಕ್ಸ್ 2016 ಕೆಲವು ಮುಖ್ಯ ಅಂಕಿ ಅಂಶಗಳು

Update: 2016-07-13 11:41 IST

ದಕ್ಷಿಣ ಅಮೆರಿಕದ ಮೊದಲ ಒಲಿಂಪಿಕ್ಸ್ ರಿಯೋ ಡಿ ಜನೈರೋದಲ್ಲಿ ಆಗಸ್ಟ್ 5ರಂದು ಆರಂಭವಾಗಲಿದೆ. ಇಲ್ಲಿದೆ 20 ಗಮನ ಸೆಳೆಯುವ ಅಂಕಿ- ಅಂಶಗಳು:

450,000 - ಕಾಂಡೋಮ್‌ಗಳು 11,000 ಅಥ್ಲೀಟ್‌ಗಳಿಗಾಗಿ ಕಾಯುತ್ತಿದೆ. 17,000 - ಒಲಿಂಪಿಕ್ ಅಥ್ಲೀಟುಗಳು ಮತ್ತು ಅಧಿಕಾರಿಗಳು ಭಾಗವಹಿಸುತ್ತಿದ್ದಾರೆ.

78,000 - ಮರಾಕಾನ ಸ್ಟೇಡಿಯಂ ಪ್ರೇಕ್ಷಕರ ಸಾಮರ್ಥ್ಯ.

206- ಒಲಿಂಪಿಕ್ಸ್ ಅಲ್ಲಿ ಭಾಗವಹಿಸುವ ದೇಶಗಳು

1- ಈ ಬಾರಿ ಸ್ಪರ್ಧಿಸುವ ನಿರಾಶ್ರಿತರ ತಂಡ

7.5 ದಶಲಕ್ಷ- ಟಿಕೆಟುಗಳು ಮಾರಾಟಕ್ಕೆ ಸಿದ್ಧವಾಗಿವೆ.

10- ಮೈಲುಗಳು (16ಕಿಮೀ) ಉದ್ದದ ಭೂಗತ ಮೆಟ್ರೋ ವ್ಯವಸ್ಥೆ ಇದೆ. ಗೇಮ್ಸ್ ಸಿದ್ಧತೆಯ ಅತೀ ದೊಡ್ಡ ಮೂಲ ಸೌಕರ್ಯ ವ್ಯವಸ್ಥೆಯಿದು.

4- ವಲಯಗಳಲ್ಲಿ ರಿಯೋ ಪಂದ್ಯಗಳು ನಡೆಯಲಿವೆ. ಬಾರಾ ದ ಟಿಜುಕಾದ ಒಲಿಂಪಿಕ್ ಪಾರ್ಕ್, ಡಿಯೋಡೊರೊ, ಕೊಪಕಬಾನಾ ಬೀಚ್ ಮತ್ತು ಮರಾಕಾನ ಮತ್ತು ಉತ್ತರದ ಒಲಿಂಪಿಕ್ ಸ್ಟೇಡಿಯಂಗಳು.

25,000- ಪಂದ್ಯಗಳ ಸುದ್ದಿ ಮಾಡಲು ಬರುವ ಪತ್ರಕರ್ತರು.

5 ಲಕ್ಷ- ಒಲಿಂಪಿಕ್ ನೋಡಲು ಬರುವ ಪ್ರವಾಸಿಗರು

61- ಇಷ್ಟು ಶೇಕಡಾವಾರು ರಿಯೋ ನಿವಾಸಿಗಳು ಒಲಿಂಪಿಕ್ ಪರವಿದ್ದರೆ, ಶೇ. 27ರಷ್ಟು ಆತಂಕಪಡುತ್ತಿದ್ದಾರೆ.

31- ಒಲಿಂಪಿಕ್ ಗ್ರಾಮದ ಟವರ್ ಬ್ಲಾಕ್‌ಗಳು. 3604 ಅಪಾರ್ಟ್‌ಮೆಂಟುಗಳನ್ನು ಒಲಿಂಪಿಕ್ ನಂತರ ಮಾರಲಾಗುವುದು. 60,000- ಒಲಿಂಪಿಕ್ ಊಟದ ಹಾಲಲ್ಲಿ ತಯಾರಾಗುವ ದಿನಂಪ್ರತಿ ಊಟದ ಪ್ಯಾಕೆಟ್.

5- ಊಟದ ಕೋಣೆಯಲ್ಲಿರುವ ಜಂಬೋಜೆಟ್‌ಗಳು

80,000- ಕುರ್ಚಿಗಳನ್ನು ಒಲಿಂಪಿಕ್ ಗ್ರಾಮದಲ್ಲಿರಲಿದೆ.

7- ರಗ್ಬೀ ಆಟದ ಆಟಗಾರರು. ಒಲಿಂಪಿಕ್‌ನಲ್ಲಿ ಮೊದಲ ಬಾರಿಗೆ ರಗ್ಬೀ ಆಡಲಾಗುತ್ತಿದೆ.

400- ಒಲಿಂಪಿಕ್ ಸ್ಪರ್ಧೆಯಲ್ಲಿ ಬಳಸಲಾಗುವ ಫುಟ್ಬಾಲ್‌ಗಳು

0- ಬ್ರೆಜಿಲ್ ಗೆದ್ದ ಫುಟ್ಬಾಲ್ ಒಲಿಂಪಿಕ್ ಪದಕ

112- ವರ್ಷಗಳ ಹಿಂದೆ ಗಾಲ್ಫ್ ಒಲಿಂಪಿಕ್ಸ್ ಅಲ್ಲಿತ್ತು.

2- ಇಬ್ಬರು ಬ್ರೆಜಿಲ್ ಅಧ್ಯಕ್ಷರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧಿಕಾರ ಕಳೆದುಕೊಂಡ ಅಧ್ಯಕ್ಷ ಡಿಲಿಮಾ ರೊಸೆಫ್ ಮತ್ತು ತಾತ್ಕಾಲಿಕ ಅಧ್ಯಕ್ಷರಾಗಿರುವ ಆತನ ವಿರೋಧಿ ಮೈಖಲ್ ಟೆಮರ್.

ಕೃಪೆ: http://timesofindia.indiatimes.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News