2010ರಲ್ಲಿ ಕಾಶ್ಮೀರದಲ್ಲಿ ತಾನೆಸಗಿದ ತಪ್ಪನ್ನೇ ಮೆಹಬೂಬ ಮಾಡುತ್ತಿದ್ದಾರೆ: ಉಮರ್ ಅಬ್ದುಲ್ಲ

Update: 2016-07-13 09:48 GMT

ಶ್ರೀನಗರ್,ಜುಲೈ 13: ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ 2010ರಲ್ಲಿ ತಾನೆಸಗಿದ್ದ ಅದೇ ತಪ್ಪನ್ನು ಪುನರಾವರ್ತಿಸುತ್ತಿದ್ದಾರೆಂದು ನ್ಯಾಶನಲ್‌ಕಾನ್ಫ್ರೆನ್ಸ್ ನಾಯಕ ಉಮರ್ ಅಬ್ದುಲ್ಲ ಹೇಳಿದ್ದಾರೆಂದು ವರದಿಯಾಗಿದೆ. ಕಾಶ್ಮೀರ ಕಣಿವೆಯಲ್ಲಿ 2010ರಲ್ಲಿ ನಡೆದದ್ದಕ್ಕೆ ಸಮಾನವಾದ ಸಂಘರ್ಷ ಈಗ ನಡೆಯುತ್ತಿದೆ. ಆಗ ಮುಖ್ಯಮಂತ್ರಿಯಾಗಿದ್ದ ತಾನು ಅಡಗಿ ಕೂತಿದ್ದೇನೆಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈಗ ಮೆಹಬೂಬ ಮುಫ್ತಿ ಎಲ್ಲೋ ಅಡಗಿಕೋತಂತಿದ್ದಾರೆ.ಸಂಘರ್ಷದ ಮೊದಲ 24-28 ಗಂಟೆಗಳು ತುಂಬ ನಿರ್ಣಾಯಕವಾಗಿರುತ್ತವೆ. ಆ ಸಮಯದಲ್ಲಿ ಜನರು ಮುಖ್ಯಮಂತ್ರಿಯ ನಿಲುವು, ನಿರ್ಣಯ ಮತ್ತು ಪ್ರತಿಕ್ರಿಯೆಗಳನ್ನು ತಿಳಿಯಬೇಕಾಗಿದೆ. ಟೆಲಿವಿಷನ್ ಮೂಲಕವಾದರೂ ಮೆಹಬೂಬ ಜನರನ್ನು ಶಾಂತರಾಗಿರಲು ವಿನಂತಿಸಿಕೊಳ್ಳಬೇಕಿತ್ತು. ಆದರೆ ಅತಿ ನಿರ್ಣಾಯಕ ಘಟ್ಟದಲ್ಲಿ ಮುಖ್ಯಮಂತ್ರಿ ಅಡಗಿಕೂತರೆಂದು ಉಮರ್ ಅಬ್ದುಲ್ಲ ಟೀಕಿಸಿದ್ದಾರೆ ಎಂದು ವರದಿಯಾಗಿದೆ.

 2010ರ ಸಂಘರ್ಷದ ಸಮಯದಲ್ಲಿ ತನ್ನನ್ನು ರಾಜಿನಾಮೆ ನೀಡಬೇಕು ಎಂದು ಅಂದು ಪ್ರತಿಪಕ್ಷ ನಾಯಕಿಯಾಗಿದ್ದ ಮೆಹಬೂಬ ಮುಫ್ತಿ ಆಗ್ರಹಿಸಿದ್ದರು. ಆದರೆ ಅದೇ ನಾಣ್ಯದಲ್ಲಿ ಮರು ಹೊಡೆತ ನೀಡಲು ನಾನು ಬಯಸುವುದಿಲ್ಲ.  ನಿಭಾಯಿಸಲು ಬಹಳ ಕಷ್ಟವಿರುವ ಪರಿಸ್ಥಿತಿಯಲ್ಲಿ ಮೆಹಬೂಬ ಸಾಗುತ್ತಿದ್ದಾರೆಂದು ಉಮರ್ ಅಬ್ದುಲ್ಲ ಹೇಳಿದ್ದಾರೆಂದು ವರದಿ ತಿಳಿಸಿದೆ.

2010ರಲ್ಲಿ ಕಾಶ್ಮೀರದಲ್ಲಿ ನಡೆದ ಸಂಘರ್ಷದಲ್ಲಿ 116 ಮಂದಿ ಹತ್ಯೆಯಾಗಿದ್ದರು. ಅಂದು ಪ್ರತಿಪಕ್ಷಗಳು ಮುಖ್ಯಮಂತ್ರಿಯಾಗಿದ್ದ ತಾನು ಕೈಲಾಗದವರಂತೆ ವರ್ತಿಸಿದ್ದೇನೆಂದು ಆರೋಪಿಸಿ ಭಾರೀ ಪ್ರತಿಭಟನೆಯನ್ನು ನಡೆಸಿದ್ದವು. ನಂತರ ನಡೆದ ಚುನಾವಣೆಯಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಭಾರೀ ಅಂತರದಿಂದ ಸೋಲುಂಡಿತ್ತು ಎಂದು ಉಮರ್ ಅಬ್ದುಲ್ಲ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News