ಹಫ್ತಾಕ್ಕಾಗಿ ಬಟ್ಟೆ ಅಂಗಡಿ ಮಾಲಕನ ಮೇಲೆ ತಂಡದಿಂದ ಹಲ್ಲೆ

Update: 2016-07-13 09:51 GMT

ಮಂಗಳೂರು, ಜು.13: ನಗರದ ಹಂಪನಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯೊಂದಕ್ಕೆ ನುಗ್ಗಿದ ನಾಲ್ವರ ತಂಡ ಮಳಿಗೆಯ ಮಾಲಕನಿಗೆ ಹಲ್ಲೆ ಮಾಡಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಬಟ್ಟೆ ಮಳಿಗೆಗೆ ಬಂದಿದ್ದ ತಂಡ ಅಂಗಡಿ ಮಳಿಗೆಗೆ ಉತ್ತಮ ವ್ಯಾಪಾರವಿದ್ದು 2 ಲಕ್ಷ ಹಣ ನೀಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಹಣ ನೀಡಲು ನಿರಾಕರಣೆ ಮಾಡುತ್ತಿದ್ದಂತೆ ತಂಡ ಮಳಿಗೆಯ ಮಾಲಕರಿಗೆ ಹಲ್ಲೆಗೈದಿದೆ. ಹಲ್ಲೆ ಘಟನೆಯು ಸಿಸಿಟಿವಿಯಲ್ಲಿಯೂ ದಾಖಲಾಗಿದೆ.

ಘಟನೆ ಬಗ್ಗೆ ಇನ್ನಷ್ಟೆ ಎಫ್‌ಐಆರ್ ದಾಖಲಾಗಬೇಕಿದೆ. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News