ಝಾಕಿರ್ ನಾಯ್ಕ್ ವಿವಾದವನ್ನು ಚರ್ಚೆಗೆತ್ತಿಕೊಳ್ಳಲಿರುವ ಆರೆಸ್ಸೆಸ್

Update: 2016-07-13 10:12 GMT

ಹೊಸದಿಲ್ಲಿ,ಜುಲೈ 13: ಉತ್ತರಪ್ರದೇಶ ಚುನಾವಣೆಯಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ಕಾನ್ಪುರದಲ್ಲಿ ಸಂಘಟಿಸಿರುವ ರಾಷ್ಟ್ರೀಯ ನಿರ್ವಾಹಕಸಮಿತಿಯ ಅಜೆಂಡಾದಲ್ಲಿ ಝಾಕಿರ್ ನಾಯ್ಕ್ ವಿವಾದವೂ ಸೇರಿದೆ ಎಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ.

ಮಥುರಾ ದಾಳಿ, ದಾದ್ರಿ ಘಟನೆ, ಕೈರಾನ ಪಲಾಯನ ಮೊದಲಾದವುಗಳ ಜೊತೆಗೆ ಝಾಕಿರ್ ನಾಯ್ಕ್ ವಿರುದ್ಧ ಪ್ರಚಾರಗಳನ್ನು ಸಹಾ ಆರೆಸ್ಸೆಸ್ ಚರ್ಚಿಸಲಿದೆಯೆನ್ನಲಾಗಿದೆ. ಉತ್ತರಪ್ರದೇಶದ ರಾಜಕೀಯ ಸ್ಥಿತಿಗತಿಗಳಿಗೆ ಸಂಬಂಧಿಸಿ ಈ ವಿಷಯಗಳನ್ನು ಸಮಿತಿ ಚರ್ಚಿಸಿದೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಝಾಕಿರ್ ನಾಯ್ಕ್ ವಿವಾದವನ್ನು ಇತರ ಎರಡು ವಿವಾದಗಳ ಜೊತೆಗೆ ಚರ್ಚಾ ವಿಷಯವಾಗಿ ಎತ್ತಿಕೊಳ್ಳಲಿದೆ ಎಂದು ಸಭೆ ನೀಡುವ ಸೂಚನೆಯಾಗಿದ್ದು ಒಟ್ಟು ಎಂಟು ವಿಷಯಗಳನ್ನು ಸಮಿತಿ ಚರ್ಚಿಸುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News