ಸಿದ್ಧಕಟ್ಟೆ ಮೂಲದ ಝಾನ್ಸಿಯ ನಿವೃತ್ತ ಬಿಷಪ್ ಡಾ. ಫ್ರೆಡ್ರಿಕ್ ಡಿಸೋಜ ನಿಧನ
Update: 2016-07-13 16:47 IST
ಮೂಡುಬಿದಿರೆ, ಜು.13: ಉತ್ತರಪ್ರದೇಶದ ಝಾನ್ಸಿ ಧರ್ಮಪ್ರಾಂತ್ಯದ ಮಾಜಿ ಬಿಷಪ್ ಡಾ. ಫ್ರೆಡ್ರಿಕ್ ಡಿಸೋಜ (81) ಮಂಗಳವಾರ ನಿಧನರಾದರು.
ಅವರು ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಮೂಲದ ದಿ. ಸೆಬಾಸ್ಟಿಯನ್ ಮತ್ತು ಮೇರಿ ಡಿಸೋಜರ ಪುತ್ರ. ಬಿಷಪ್ ಡಾ. ಫ್ರೆಡ್ರಿಕ್ ಡಿಸೋಜಾರ ನಾಲ್ವರು ಸಹೋದರರಾದ ಫಾ.ಆ್ಯಂಟನಿ ಡಿಸೋಜ (ಮಂಗಳೂರು), ಫಾ.ಚಾರ್ಲ್ಸ್ ಡಿಸೋಜ (ಶ್ರೀಲಂಕಾ), ಫಾ. ಡೊಮಿನಿಕ್ ಡಿಸೋಜ (ಶ್ರೀಲಂಕಾ) ಮತ್ತು ಫಾ.ಜಾರ್ಜ್ ಡಿಸೋಜಾ (ಆಜ್ಮೇರ್) ಧರ್ಮಗುರುಗಳಾಗಿದ್ದು, ಸಹೋದರಿಯರಾದ ಸಿ. ಬೆನೆಡಿಕ್ಟಾ, ಸಿ. ಎಥೆಲ್ ಬರ್ಗಾ ಮತ್ತು ಸಿ. ಹಿಲ್ಡಾ ಅವರು ಧರ್ಮಭಗಿನಿಯರಾಗಿದ್ದಾರೆ.
1961ರ ಜನವರಿ 1ರಂದು ಗುರುದೀಕ್ಷೆ ಪಡೆದ ಡಾ. ಫ್ರೆಡ್ರಿಕ್ 1977ರ ಎ.25ರಂದು ಝಾನ್ಸಿಯ ಬಿಷಪ್ ಆಗಿ ದೀಕ್ಷೆ ಪಡೆದಿದ್ದರು. ಅವರು 2012ರಲ್ಲಿ ನಿವೃತ್ತರಾಗಿದ್ದರು. ಅವರ ಅಂತ್ಯಕ್ರಿಯೆ ಜುಲೈ 15ರಂದು ಝಾನ್ಸಿಯ ಸಂತ ಜೂದರ ಪುಣ್ಯಕ್ಷೇತ್ರದಲ್ಲಿ ನೆರವೇರಲಿದೆ.