×
Ad

ಒತ್ತಡ ಇರುವುದು ಸಾಮಾನ್ಯ: ಶಾಸಕ ಜೆ.ಆರ್. ಲೋಬೊ

Update: 2016-07-13 16:53 IST

ಮಂಗಳೂರು, ಜು.13: ಕಾರ್ಯಾಂಗದ ಮೇಲೆ ಶಾಸಕಾಂಗದ ಒತ್ತಡ, ಶಾಸಕಾಂಗದ ಮೇಲೆ ಜನರ ಒತ್ತಡ ಇರುವುದು ಸಾಮಾನ್ಯ. ಅಂತಹ ಒತ್ತಡಗಳಿಂದಲೆ ಕೆಲಸ ಕಾರ್ಯಗಳು ನಡೆಯುತ್ತಿರುತ್ತದೆ ಎಂದು ಶಾಸಕ ಜೆ.ಆರ್. ಲೋಬೊ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗಣಪತಿ ಅವರ ವಿಚಾರದಲ್ಲಿ ಅವರು ಟಿ.ವಿ. ಮಾಧ್ಯಮಗಳಿಗೆ ನೀಡಲಾಗಿರುವ ಹೇಳಿಕೆಯ ಆಧಾರವಾಗಿಟ್ಟುಕೊಂಡು ಸಚಿವ ಜಾರ್ಜ್ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಗಣಪತಿ ಅವರದ್ದು ಡೆತ್ ಡಿಕ್ಲೆರೇಷನ್ ಅಲ್ಲ. ಅದು ಟಿ.ವಿ. ಸಂದರ್ಶನದಲ್ಲಿ ಟಿ.ವಿ. ನಿರೂಪಕರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರವಷ್ಟೇ. ಟಿ.ವಿ.ಯಲ್ಲಿ ಸಂದರ್ಶನ ನೀಡಿದ ನಂತರ ಯಾವುದಾದರೂ ಘಟನೆ ನಡೆದಿರಲೂಬಹುದು. ಇದೆಲ್ಲ ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News