ಪುತ್ತೂರು: ಫಿಲೋಮಿನಾದಲ್ಲಿ ಬಲಿ ಪೂಜೆ ಮತ್ತು ದಿವ್ಯ ಚೇತನ ಸಂಘದ ಕಾರ್ಯಕ್ರಮ

Update: 2016-07-13 13:44 GMT

ಪುತ್ತೂರು, ಜು.13: ಪ್ರತಿಯೊಬ್ಬ ಕ್ರೈಸ್ತ ಅನುಯಾಯಿಯೂ ತನ್ನ ಕರ್ತವ್ಯಗಳನ್ನು ಅರಿತು, ಧರ್ಮ ಮತ್ತು ಸಮಾಜದ ಬೆಳವಣಿಗೆಯಲ್ಲಿ ಕೈ ಜೋಡಿಸಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ರೆ.ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಹೇಳಿದ್ದಾರೆ.

ಕಾಲೇಜಿನ ದಿವ್ಯ ಚೇತನ ಪ್ರಾರ್ಥನಾ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಬಲಿಪೂಜೆ ಮತ್ತು ದಿವ್ಯ ಚೇತನ ಸಂಘದ ಪ್ರಥಮ ಕಾರ್ಯಕ್ರಮದಲ್ಲಿ ಪ್ರವಚನ ನೀಡುತ್ತಾ, ದೇವರ ಕೆಲಸ ಯಾರು ಮಾಡುತ್ತಾರೆ ಎಂದು ಕೇಳುವ ಬದಲು, ತಾವಾಗಿ ಮುಂದೆ ಬಂದು ಅದನ್ನು ನೆರವೇರಿಸಬೇಕು. ದೇವರ ಉದ್ದೇಶ ಏನು ಎಂದು ಚೆನ್ನಾಗಿ ಅರಿತು ಕೆಲಸವನ್ನು ಮಾಡಬೇಕು ಎಂದು ಹೇಳಿದರು.

ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ರೆ.ಫಾ. ವಿಜಯ್ ಲೋಬೊ ಬಲಿಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೊ ನೊರೊನ್ಹ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ದಿವ್ಯ ಚೇತನ ಸಂಘದ ನಿರ್ದೇಶಕ ರೆ.ಫಾ. ರಿತೇಶ್ ರೋಡ್ರಿಗಸ್ ಸಂಘದ ನೂತನ ಪದಾಧಿಕಾರಿಗಳ ಪರಿಚಯ ಮತ್ತು ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ನೀಡಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News