×
Ad

ತಂಡದಿಂದ ವ್ಯಕ್ತಿಗೆ ಹಲ್ಲೆ

Update: 2016-07-13 23:46 IST

ಕಾಪು, ಜು.13: ಮೂರು ಕಾರುಗಳಲ್ಲಿ ಬಂದ ತಂಡವೊಂದು ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ಕಾಪುವಿನಲ್ಲಿ ನಡೆದಿದೆ.
ಹಲ್ಲೆಗೊಳಗಾದವನನ್ನು ಕಾಪುವಿನ ಕಲ್ಯ ನಿವಾಸಿ ರಶೀದ್ (34) ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದ ರಶೀದ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ರಿಟ್ಜ್, ಇನೋವಾ, ಬಿಎಂಡಬ್ಲ್ಯೂ ಕಾರುಗಳಲ್ಲಿ ಬಂದ ಹೆಜಮಾಡಿಯ ಗುಲಾಂ ಮುಹಮ್ಮದ್, ಕಾಪು ಕೊಂಬಗುಡ್ಡೆಯ ರಫೀಕ್, ಎಂ.ಎಸ್. ರಝಾಕ್, ಕೋಡಿಯ ಸರ್ಫರಾಝ್, ಹನೀಫ್, ಪಕ್ಷಿಕೆರೆಯ ಅಝೀಝ್ ಎಂಬವರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಶೀದ್ ಮಂಗಳವಾರ ಸಂಜೆ ಮೂಳೂರಿನ ಸುನ್ನಿ ಸೆಂಟರ್ ಎದುರು ತನ್ನ ಬಾವನ ಅಂಗಡಿಯ ಹೊರಗೆ ನಿಂತುಕೊಂಡಿದ್ದಾಗ ಮೂರು ಕಾರುಗಳಲ್ಲಿ ಬಂದ ತಂಡ ರಶೀದ್‌ರಲ್ಲಿ ಶೇಖ್ ಅಬ್ದುಲ್ಲಾರ ಮೊಬೈಲ್‌ನಿಂದ ಕರೆ ಮಾಡಿಕೊಡುವಂತೆ ತಿಳಿಸಿದ್ದರು. ರಶೀದ್ ನಂಬರ್ ಗೊತ್ತಿಲ್ಲ ಎಂದು ಹೇಳಿದಾಗ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News