ವ್ಯಕ್ತಿ ನಾಪತ್ತೆ
Update: 2016-07-13 23:48 IST
ಮಂಗಳೂರು,ಜು.13: ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲುವಿನ ತಾರನಾಥ (40) ಎಂಬವರು ಜು.7ರಂದು ನಾಪತ್ತೆಯಾದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲಸಕ್ಕೆಂದು ಮನೆಯಿಂದ ಹೊರ ಹೋದ ಇವರು ಸಾಧಾರಣ ಶರೀರ, ಎಣ್ಣೆಕಪ್ಪುಮೈಬಣ್ಣ ಹೊಂದಿದ್ದು, ಪ್ಯಾಂಟ್ ಮತ್ತು ಹಸಿರು ಬಣ್ಣದ ಶರ್ಟು ಧರಿಸಿದ್ದಾರೆ.ಇವರನ್ನು ಕಂಡವರು ಬಂಟ್ವಾಳ ನಗರ ಠಾಣೆಗೆ (ದೂ.ಸಂ:-08255- 232111) ಮಾಹಿತಿ ನೀಡಲು ಪ್ರಕಟನೆ ತಿಳಿಸಿದೆ.