ಜು.15ರಂದು ಮುಸ್ಲಿಮ್ ಸಂಘಟನೆಗಳ ವೇದಿಕೆ ವತಿಯಿಂದ ಪ್ರತಿಭಟನೆ
ಮಂಗಳೂರು, ಜು.14: ಮಾಧ್ಯಮಗಳಲ್ಲಿ ಇಸ್ಲಾಂ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯ್ಕಾ ಅವರ ಬಗ್ಗೆ ನಡೆಸಲಾಗುತ್ತಿರುವ ಅಪಪ್ರಚಾರವನ್ನು ಖಂಡಿಸಿ ಜು.15ರಂದು ಮುಸ್ಲಿಮ್ ಸಂಘಟನೆಗಳ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಲಿದೆ.
ಜು.15ರಂದು ಅಪರಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಲಿದೆ. ಪ್ರತಿಭಟನಾ ಸಭೆಯಲ್ಲಿ ದ.ಕ. ಜಿಲ್ಲಾ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಥಾವುಲ್ಲಾ ಜೋಕಟ್ಟೆ, ಪುತ್ತೂರು ಕೇಂದ್ರ ಜುಮಾ ಮಸೀದಿಯ ಖತೀಬ್ ಎಸ್.ಬಿ. ದಾರಿಮಿ, ಪಿಎಫ್‌ಐನ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಜಮಾ ಅತೇ ಇಸ್ಲಾಮೀ ಹಿಂದ್‌ನ ಮುಹಮ್ಮದ್ ಕುಂಞಿ, ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್‌ನ ಇಸ್ಮಾಯೀಲ್ ಶಾಫಿ, ದ.ಕ. ಜಿಲ್ಲಾ ಸೆಂಟ್ರಲ್ ಕಮಿಟಿಯ ಹಮೀದ್ ಕಂದಕ್, ಜಮೀಯತುಲ್ ಫಲಾಹ್‌ನ ಹಾಜಿ ಅಬ್ದುಲ್ಲತೀಫ್, ಯುನಿವೆಫ್ ಕರ್ನಾಟಕದ ರಫೀವುದ್ದೀನ್ ಕುದ್ರೋಳಿ, ದ.ಕ. ಜಿಲ್ಲಾ ಎಸ್‌ಡಿಪಿಐ ಮುಖಂಡ ಹನೀಫ್ ಖಾನ್ ಕೊಡಾಜೆ, ಮುಸ್ಲಿಂ ಸಂಘಟನೆಗಳ ಒಕ್ಕೂಟದ ಕೆ. ಅಶ್ರಫ್, ಮುಸ್ಲಿಂ ಐಕ್ಯತಾ ವೇದಿಕೆಯ ಮುಸ್ತಫಾ ಕೆಂಪಿ, ಮಂಗಳೂರು ಸೆಂಟ್ರಲ್ ಕಮಿಟಿಯ ಅಝೀಝ್ ಕುದ್ರೋಳಿ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ರಫೀಕ್ ಮಾಸ್ಟರ್, ಮುಸ್ಲಿಂ ಲೇಖಕರ ಸಂಘದ ಉಮರ್ ಯು.ಎಚ್., ಹೋಪ್ ಫೌಂಡೇಶನ್‌ನ ಸೈಫ್ ಸುಲ್ತಾನ್ ಮತ್ತಿತರರು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.